alex Certify
ಕನ್ನಡ ದುನಿಯಾ       Mobile App
       

Kannada Duniya

ನಾಟಿ ಕೋಳಿ ತಿನ್ನಲು ಬಂದು ಸಿಕ್ಕಿ ಬಿದ್ದಿದ್ದ ಚಿರತೆ ಪರಾರಿ

leopard 3679ರೈತರೊಬ್ಬರು ಸಾಕಿದ್ದ ನಾಟಿ ಕೋಳಿಗಳನ್ನು ತಿನ್ನಲು ಬಂದಿದ್ದ ಚಿರತೆಯೊಂದು ಗೂಡಿನೊಳಗೆ ಸಿಕ್ಕಿ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಿಡಿಯಲು ಮುಂದಾದ ವೇಳೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ತಾಲೂಕಿನ ಶಾಂತಿಗ್ರಾಮ ಬಳಿಯ ಕೆರೆಮುಂದಲ ಕೊಪ್ಪಲು ಗ್ರಾಮದ ರೈತರೊಬ್ಬರ ಕೋಳಿ ಗೂಡಿಗೆ ನುಗ್ಗಿರುವ ಚಿರತೆ ಎರಡು ಕೋಳಿಗಳನ್ನು ತಿಂದಿದ್ದು, ಹೊರ ಬರುವ ಪ್ರಯತ್ನದಲ್ಲಿ ಗೂಡಿನೊಳಗೆ ಸಿಕ್ಕಿ ಬಿದ್ದಿದೆ. ಈ ಚಿರತೆ ಕಾಟದಿಂದ ರೋಸತ್ತಿದ್ದ ಸಾರ್ವಜನಿಕರು ಅದನ್ನು ಹಿಡಿಯುವ ಸಲುವಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ.

ಸಕಲ ಸಿದ್ದತೆಗಳೊಂದಿಗೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಸುಮಾರು 2 ರಿಂದ 3 ಗಂಟೆಗಳ ಕಾಲ ಕಾರ್ಯಾಚರಣೆಗೆ ತಯಾರಿ ಮಾಡಿಕೊಂಡಿದೆ. ಗೂಡಿನ ಸುತ್ತಲೂ ಬಲೆ ಹಾಕಲಾಗಿದ್ದು, ಅರವಳಿಕೆ ಮದ್ದು ನೀಡಲು ಸಜ್ಜಾಗಿದೆ. ಆದರೆ ಚಿರತೆ ಕೋಳಿ ಗೂಡಿನ ಮಾಡಿನ ಮೇಲೆ ಹಾರಿ ಕ್ಷಣಾರ್ಧದಲ್ಲೇ ಪರಾರಿಯಾಗಿದ್ದು, ತಾನಾಗೇ ಸಿಕ್ಕಿ ಬಿದ್ದಿದ್ದ ಚಿರತೆಯನ್ನು ಹಿಡಿಯಲು ವಿಫಲವಾಗಿದ್ದಕ್ಕೆ ಸಾರ್ವಜನಿಕರು, ಅರಣ್ಯ ಇಲಾಖೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...