alex Certify
ಕನ್ನಡ ದುನಿಯಾ       Mobile App
       

Kannada Duniya

ವಿಬ್ ಗಯಾರ್ ಶಾಲೆ ಬಳಿ ಸೆರೆ ಸಿಕ್ಕಿದ್ದ ಚಿರತೆ ಪರಾರಿ

leopard_story_647_020716073102

ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಸತತ ಕಾರ್ಯಾಚರಣೆ ಮೂಲಕ ವಿಬ್ ಗಯಾರ್ ಶಾಲೆಯ ಬಳಿ ಸೆರೆ ಹಿಡಿದಿದ್ದು, ಇದನ್ನು ಬನ್ನೇರುಘಟ್ಟದ ಉದ್ಯಾನವನದಲ್ಲಿ ಬೋನಿನಲ್ಲಿಟ್ಟಿದ್ದ ವೇಳೆ ತಪ್ಪಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬೋನಿನ ಬೀಗವನ್ನು ಸರಿಯಾಗಿ ಹಾಕದೆ ಇರುವುದೇ ಚಿರತೆ ತಪ್ಪಿಸಿಕೊಳ್ಳಲು ಕಾರಣವೆಂಬ ಮಾತುಗಳು ಕೇಳಿ ಬರುತ್ತಿದ್ದು, ಚಿರತೆ ತಪ್ಪಿಸಿಕೊಂಡಿರುವ ಮಾಹಿತಿ ಹರಡುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕಳೆದ ಶನಿವಾರ ರಾತ್ರಿ ವಿಬ್ ಗಯಾರ್ ಶಾಲೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು, ಫೆಬ್ರವರಿ 7 ರಂದು ಈ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಚಿರತೆ ಸೆರೆ ಹಿಡಿಯುವ ವೇಳೆ ಹಲವರನ್ನು ಗಾಯಗೊಳಿಸಿತ್ತು. ಪ್ರಯಾಸಪಟ್ಟು ಸೆರೆ ಹಿಡಿದಿದ್ದ ಚಿರತೆ ಈಗ ತಪ್ಪಿಸಿಕೊಂಡಿರುವುದು ಸಹಜವಾಗಿಯೇ ಆತಂಕವನ್ನುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...