alex Certify
ಕನ್ನಡ ದುನಿಯಾ       Mobile App
       

Kannada Duniya

ಚಿರತೆ ದಾಳಿಗೆ ಫಾರಂನಲ್ಲಿದ್ದ ಕರುಗಳ ಸಾವು

ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಗ್ರಾಮದ ಫಾರಂವೊಂದಕ್ಕೆ ಚಿರತೆ ದಾಳಿ ನಡೆಸಿ ಎರಡು ಕರುಗಳನ್ನು ಹತ್ಯೆ ಮಾಡಿದೆ.

ಗ್ರಾಮದ ಅರುಣ್ ಎಂಬುವವರಿಗೆ ಸೇರಿದ ಫಾರಂಗೆ ನುಗ್ಗಿರುವ ಚಿರತೆ ಎರಡು ಕರುಗಳ ಮೇಲೆ ದಾಳಿ ನಡೆಸಿದೆ. ಅದರಲ್ಲಿ ಒಂದು ಕರುವಿನ ಅರ್ಧ ಭಾಗವನ್ನು ತಿಂದುಹಾಕಿದೆ.

ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ಧಾರೆ. ಕಳೆದ ಕೆಲವು ದಿನಗಳಿಂದ ಚಿರತೆ ಈ ಪ್ರದೇಶದಲ್ಲಿ ಓಡಾಡುತ್ತಿದ್ದು, ಈ ಕುರಿತು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಭಯ ಭೀತಿಯಿಂದಲೇ ಓಡಾಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...