alex Certify
ಕನ್ನಡ ದುನಿಯಾ       Mobile App
       

Kannada Duniya

ವಿಧಾನಸಭೆ ಕಲಾಪ: ಸಂಬಂಧಿಕರಿಂದ ಪ್ರಮಾಣ ಪತ್ರ ತರಿಸಿಕೊಂಡ ಶಾಸಕರು

ಇನ್ನೇನು ರಾಜ್ಯ ವಿಧಾನಸಭಾ ಕಲಾಪ ಶುರುವಾಗಲಿದೆ. ಕಲಾಪದಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ. ವಿಶ್ವಾಸಮತ ಯಾಚನೆಗೆ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಆದ್ರೆ ಎಲ್ಲ ಶಾಸಕರು ಕಳೆದ ಮೂರು ದಿನಗಳಿಂದ ಮನೆಗೆ ಹೋಗಿಲ್ಲ. ಹಾಗಾಗಿ ಶಾಸಕರು ಸಂಬಂಧಿಕರಿಂದ ಪ್ರಮಾಣ ಪತ್ರ ತರಿಸಿಕೊಳ್ತಿದ್ದಾರೆ.

ಶಾಸಕರ ಸಂಬಂಧಿಕರು ತಮ್ಮ ಊರುಗಳಿಂದ ಪ್ರಮಾಣ ಪತ್ರವನ್ನು ಶಾಸಕರಿಗೆ ತಂದು ಕೊಡ್ತಿದ್ದಾರೆ. ಇದೇ ವೇಳೆ ಒಬ್ಬೊಬ್ಬರಾಗಿ ಶಾಸಕರು ವಿಧಾಸಭೆಯತ್ತ ಬರ್ತಿದ್ದಾರೆ. ಮೂರು ಬಸ್ ಗಳಲ್ಲಿ ಬಿಜೆಪಿ ಶಾಸಕರು ವಿಧಾನಸಭೆಗೆ ಹೊರಟಿದ್ದಾರೆ. ಕಲಾಪಕ್ಕೂ ಮುನ್ನ ಬಿಜೆಪಿ ಹಾಗೂ ಕಾಂಗ್ರೆಸ್, ಜೆಡಿಎಸ್ ಸಭೆ ನಡೆದಿದೆ.

ಸಭೆಯಲ್ಲಿ ಅಡ್ಡ ಮತದಾನ ಮಾಡಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಶಾಸಕರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. 11 ಗಂಟೆಗೆ ವಿಶೇಷ ಅಧಿವೇಶನ ನಡೆಯಲಿದೆ. ಎಲ್ಲ ಶಾಸಕರು ಹಾಜರಾಗುವ ಸಾಧ್ಯತೆಯಿದೆ. ಶಾಸಕರು ಗೈರಾದ್ರೆ ಇದು ವಿಶ್ವಾಸಮತ ಯಾಚನೆ ಮೇಲೆ ಪ್ರಭಾವ ಬೀರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...