alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ ಇಡಿ ಕೋರ್ಸ್ ಮಾಡುತ್ತಿರುವ ಪಿಯು ಉಪನ್ಯಾಸಕರಿಗೆ ‘ಶಾಕ್’ ಕೊಟ್ಟ ಸರ್ಕಾರ

ಪದವಿ ಪೂರ್ವ ಉಪನ್ಯಾಸಕ ಹುದ್ದೆಗೆ ನೇಮಕಾತಿ ಹೊಂದಿ, ಇಲಾಖೆಯ ನಿರ್ದೇಶನದ ಮೇರೆಗೆ ಬಿ ಇಡಿ ಕೋರ್ಸ್ ಮಾಡುತ್ತಿರುವ ಉಪನ್ಯಾಸಕರಿಗೆ ಸರ್ಕಾರ ಈಗ ಶಾಕ್ ನೀಡಿದೆ.

2013 ರಲ್ಲಿ ನೇಮಕಾತಿಗೊಂಡ ಒಟ್ಟು 1,763 ಉಪನ್ಯಾಸಕರ ಪೈಕಿ 624 ಮಂದಿ ಬಿ ಇಡಿ ಪದವಿ ಪಡೆದಿರಲಿಲ್ಲ. ಬಳಿಕ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಇವರುಗಳು ಬಿ ಇಡಿ ಪದವಿ ಪಡೆಯುವ ಸಲುವಾಗಿ ಬೋಧನಾ ಕರ್ತವ್ಯದಿಂದ ಹೊರಗಿದ್ದಾರೆ.

ಇದೀಗ ಪದವಿ ಪೂರ್ವ ಶಿಕ್ಷಣ ಮಂಡಳಿ ಈ ಉಪನ್ಯಾಸಕರುಗಳ 120 ಗಳಿಕೆ ರಜೆಗಳಿಗೆ ಕತ್ತರಿ ಹಾಕಲು ಮುಂದಾಗಿದೆ. ಜೊತೆಗೆ ಬಿ ಇಡಿ ವ್ಯಾಸಂಗ ದಿನಗಳನ್ನು ಸೇವಾವಧಿಯ ದಿನಗಳೆಂದೂ ಪರಿಗಣಿಸುತ್ತಿಲ್ಲ. ಇದು ಬಿ ಇಡಿ ವ್ಯಾಸಂಗ ಮಾಡುತ್ತಿರುವ ಪಿಯು ಉಪನ್ಯಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...