alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಬರ್ ಅಟ್ಯಾಕ್ ಗೆ ತುತ್ತಾದ ಲ್ಯಾಪ್ ಟಾಪ್

smg-atack

ಶಿವಮೊಗ್ಗ: ವಾನ್ನಕ್ರೈ ರಾನ್ಸಮ್ ವೇರ್ ದಾಳಿಯಿಂದಾಗಿ ವಿಶ್ವದೆಲ್ಲೆಡೆ ಅಲ್ಲೋಲಕಲ್ಲೋಲ ಉಂಟಾಗಿರುವಂತೆಯೇ ಶಿವಮೊಗ್ಗದಲ್ಲಿಯೂ ಸಹಾಯಕ ಪ್ರಾಧ್ಯಾಪಕರೊಬ್ಬರ ಲ್ಯಾಪ್ ಟಾಪ್ ದಾಳಿಗೆ ತುತ್ತಾಗಿದೆ.

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ನಿವಾಸಿ ಹಾಗೂ ಪೆಸಿಟ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರ್ಜುನ್ ಅವರ ಲ್ಯಾಪ್ ಟಾಪ್ ವೈರಸ್ ದಾಳಿಗೆ ಒಳಗಾಗಿದೆ.

ಲ್ಯಾಪ್ ಟಾಪ್ ಸ್ಕ್ರೀನ್ ಮೇಲೆ ಡೈಲಾಗ್ ಬಾಕ್ಸ್ ಕಾಣಿಸಿಕೊಂಡಿದ್ದು ಬಿಟ್ ಕಾಯಿನ್ ರೂಪದಲ್ಲಿ 600 ಡಾಲರ್ ಕೊಡುವಂತೆ ಬೇಡಿಕೆ ಇಡಲಾಗಿದೆ.

ನಿಮ್ಮ ಎಲ್ಲ ಫೈಲ್ ಗಳನ್ನು ಅಳಿಸಿ ಹಾಕಲಾಗುತ್ತದೆ. ಕೆಲವು ಫೈಲ್ ಗಳನ್ನು ನಮ್ಮ ಪ್ರೀ ಟ್ರಯಲ್ ಸರ್ವೀಸ್ ನಲ್ಲಿ ಡಿಸ್ಕ್ರಿಪ್ಟ್ ಮಾಡಬಹುದು. ಎಲ್ಲ ಫೈಲ್ ಗಳನ್ನು ಪುನಃ ಬಳಸಲು 3 ದಿನಗಳಲ್ಲಿ ನಮಗೆ ಹಣ ನೀಡಬೇಕೆಂದು ವಾರ್ನಿಂಗ್ ಮಾಡಲಾಗಿದೆ.

ಹ್ಯಾಕರ್ಸ್ ಗಳು ಬೇಡಿಕೆ ಇಟ್ಟಂತೆ ಹಣ ಹಾಕಲಾರೆ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡುತ್ತೇನೆ. ಲ್ಯಾಪ್ ಟಾಪ್ ನಲ್ಲಿ ಮಹತ್ವದ ಫೈಲ್ ಗಳೇನೂ ಇಲ್ಲ. ಇದನ್ನು ಫಾರ್ಮೇಟ್ ಮಾಡಿಸುತ್ತೇನೆ ಎಂದು ಅರ್ಜುನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...