alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ಮಗನ ನೆನಪಿಗಾಗಿ ಕ್ಲಿನಿಕ್ ತೆರೆಯಲು ಮುಂದಾದ ಹೆತ್ತವರು

lalbaghಲಾಲ್ ಬಾಗ್ ನಲ್ಲಿ ಕಲ್ಲು ಬಿದ್ದು ಮೃತಪಟ್ಟಿರುವ 6 ವರ್ಷದ ಬಾಲಕ ವಿಕ್ರಂ ಕುಮಾರ್ ಪೋಷಕರು ಬಡವರಿಗೆ ಉಚಿತ ಚಿಕಿತ್ಸೆ ನೀಡಲು ಮಗನ ಹೆಸರಲ್ಲಿ ಕ್ಲಿನಿಕ್ ಒಂದನ್ನು ತೆರೆಯಲು ಮುಂದಾಗಿದ್ದಾರೆ.

ವಿಕ್ರಂ ಪೋಷಕರಾದ ಎನ್.ಕುಮಾರ್ ಮತ್ತು ರೇವತಿ ಅವರನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ಮಾಡಿದ್ದು, 5 ಲಕ್ಷ ರೂಪಾಯಿ ಪರಿಹಾರ ಚೆಕ್ ನೀಡಿದ್ದಾರೆ. ಆದ್ರೆ ಮೊದಲು ಚೆಕ್ ಸ್ವೀಕರಿಸಲು ದಂಪತಿ ಒಪ್ಪಲಿಲ್ಲ. ತಮಗಿದ್ದಿದ್ದು, ಒಬ್ಬನೇ ಮಗ, ಅವನನ್ನೇ ಕಳೆದುಕೊಂಡ ಮೇಲೆ ಹಣ ಇಟ್ಟುಕೊಂಡು ಏನು ಮಾಡಲಿ ಅಂತಾ ಅವರು ಪ್ರಶ್ನಿಸಿದ್ರು.

ಈ ಹಣದಲ್ಲಿ ಮಗನ ಹೆಸರಲ್ಲಿ ಶ್ರೀರಾಂಪುರಂನಲ್ಲೊಂದು ಕ್ಲಿನಿಕ್ ತೆರೆಯುವುದಾಗಿ ಕುಮಾರ್ ತಿಳಿಸಿದ್ದಾರೆ. ಅಷ್ಟೇ ಅಲ್ಲ ಎಂಬಿಬಿಎಸ್ ಓದುವ ಹಂಬಲದಲ್ಲಿರುವ ತಮ್ಮ ಸಂಬಂಧಿಕರ ಮಗಳಿಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಮೇಯರ್ ಜಿ.ಪದ್ಮಾವತಿ ಅವರನ್ನು ಕೂಡ ವಿಕ್ರಂ ಪೋಷಕರು ಭೇಟಿ ಮಾಡಿದ್ದಾರೆ.

ಮೃತ ಬಾಲಕ ಬಿಬಿಎಂಪಿ ಶಾಲೆಯಲ್ಲಿ ಓದುತ್ತಿದ್ದ, ಹಾಗಾಗಿ ಪಾಲಿಕೆ ವತಿಯಿಂದ 50,000 ರೂಪಾಯಿ ಪರಿಹಾರ ನೀಡುವುದಾಗಿ ಮೇಯರ್ ಭರವಸೆ ನೀಡಿದ್ದಾರೆ. ಅವಘಡ ನಡೆದ ಜಾಗದಲ್ಲಿ ವಿಕ್ರಂ ಫೋಟೋ ಸಹಿತ ನೇಮ್ ಪ್ಲೇಟ್ ಒಂದನ್ನು ಹಾಕುವಂತೆ ಪೋಷಕರು ಮನವಿ ಮಾಡಿದ್ದಾರೆ, ತಿಂಗಳಿಗೊಮ್ಮೆ ಬಂದು ಆ ಜಾಗದಲ್ಲಿ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...