alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಧ್ಯಮಗಳ ಮುಂದೆ ಬಂದ ಸುಂದರ್ ಗೌಡ-ಲಕ್ಷ್ಮಿ ನಾಯ್ಕ್

ಮದುವೆ ನಂತ್ರ ನಿರ್ಮಾಪಕ ಸುಂದರ್ ಗೌಡ ಹಾಗೂ ಲಕ್ಷ್ಮಿ ನಾಯ್ಕ್ ಮಾಧ್ಯಮಗಳ ಮುಂದೆ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ಸುಂದರ್ ಗೌಡ ಮನೆಗೆ ಬಂದ ಲಕ್ಷ್ಮಿ ನಾಯ್ಕ್ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ರು. ಮುಂದೆ ಎಲ್ಲವೂ ಒಳ್ಳೆಯದಾಗುತ್ತೆ. ನಮ್ಮನ್ನು ತಂದೆ-ತಾಯಿ ಒಪ್ಪಿಕೊಳ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ಬೆಳಿಗ್ಗೆ ದುನಿಯಾ ವಿಜಿ ಆಶ್ರಯ ಪಡೆದಿದ್ದ ನವದಂಪತಿ ನಂತ್ರ ಯಲಹಂಕ ನ್ಯೂಟೌನ್​ ಪೊಲೀಸ್​ ಠಾಣೆಗೆ ಹೋಗಿ ತಮ್ಮ ಹೇಳಿಕೆ ದಾಖಲಿಸಿದ್ರು. ಸುಂದರ್ ಗೌಡ ಯಾವುದೇ ಬಲವಂತ ಮಾಡಿಲ್ಲ. ನನ್ನ ಇಚ್ಛೆಯಂತೆ ಸುಂದರ್ ಗೌಡರೊಂದಿಗೆ ಮದುವೆಯಾಗಿದ್ದೇನೆಂದು ಲಕ್ಷ್ಮಿ ನಾಯ್ಕ್ ಪೊಲೀಸ್ ಮುಂದೆ ಹೇಳಿಕೆ ನೀಡಿದ್ರು.

ನಂತ್ರ ಚೆನ್ನಮ್ಮನಕೆರೆ ಬಳಿ ಇರುವ ಸುಂದರ್ ಗೌಡ ಮನೆಗೆ ಬಂದ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳಲಾಯ್ತು. ನಂತ್ರ ಮಾಧ್ಯಮಗಳ ಪ್ರಶ್ನೆಗೆ ಲಕ್ಷ್ಮಿ ಹಾಗೂ ಸುಂದರ್ ಗೌಡ ಉತ್ತರ ನೀಡಿದ್ರು. ಚಿಕ್ಕಮಗಳೂರಿಗೆ ಹೋಗುವ ದಾರಿಯಲ್ಲಿರುವ ದೇವಸ್ಥಾನವೊಂದರಲ್ಲಿ ಮದುವೆಯಾಗಿರುವುದಾಗಿ ಸುಂದರ್ ಗೌಡ ಹೇಳಿದ್ರು. ಮದುವೆಗೆ ಸುಂದರ್ ಗೌಡ ಸ್ನೇಹಿತರಲ್ಲದೆ ಲಕ್ಷ್ಮಿ ನಾಯ್ಕ್ ಅಜ್ಜಿ ಸಂಬಂಧಿಕರು ಬಂದಿದ್ದರಂತೆ.

ಇದೇ ವೇಳೆ ಮಾತನಾಡಿದ ನಟ ದುನಿಯಾ ವಿಜಿ, ನವ ಜೋಡಿಗೆ ಒಳ್ಳೆದಾಗ್ಲಿ. ಎಲ್ಲ ಸರಿಯಾಗ್ಲಿ. ವೈಮನಸ್ಸು ಬೇಡ ಎಂದು ಆಶೀರ್ವಾದ ಮಾಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...