alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಡ್ನಾಪ್ ಆಗಿದ್ದ ಐ.ಟಿ. ಅಧಿಕಾರಿ ಪುತ್ರನ ಶವ ಪತ್ತೆ

ಬೆಂಗಳೂರು: ಅಪಹರಣಗೊಂಡಿದ್ದ ಐ.ಟಿ. ಅಧಿಕಾರಿ ಪುತ್ರ ಶರತ್ ಶವ ರಾಮೋಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಸೆಪ್ಟಂಬರ್ 12 ರಂದು ಶರತ್ ನನ್ನು ಅಪಹರಿಸಲಾಗಿದ್ದು, ಸೆಪ್ಟಂಬರ್ 14 ರಂದು ಜ್ಞಾನಭಾರತಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಸೆಲ್ಫಿ ವಿಡಿಯೋ ಮಾಡಿಸಿ ಅಪಹರಣಕಾರರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕರಣದ ತನಿಖೆಗಾಗಿ 4 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಆದರೆ, ಅಪಹರಣಕಾರರು ಶರತ್ ನನ್ನು ಹತ್ಯೆ ಮಾಡಿ ಶವವನ್ನು ಕೆರೆಗೆ ಎಸೆದಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...