alex Certify
ಕನ್ನಡ ದುನಿಯಾ       Mobile App
       

Kannada Duniya

ಲೇಡಿ ರೌಡಿಶೀಟರ್ ಗೆ ಅಧ್ಯಕ್ಷೆ ಪಟ್ಟ ನೀಡಿದ್ದನ್ನು ಸಮರ್ಥಿಸಿಕೊಂಡ ಮುತಾಲಿಕ್

ಬೆಂಗಳೂರು: ಲೇಡಿ ರೌಡಿ ಶೀಟರ್ ಯಶಸ್ವಿನಿ ಗೌಡ ಅವರಿಗೆ ಶ್ರೀರಾಮಸೇನೆಯ ಬೆಂಗಳೂರು ಘಟಕದ ಮಹಿಳಾ ಅಧ್ಯಕ್ಷೆ ಸ್ಥಾನ ಒಲಿದುಬಂದಿದೆ.

ಮೀಟರ್ ಬಡ್ಡಿ ದಂಧೆ, ಪತಿಯನ್ನೇ ಕೊಲೆ ಮಾಡಿದ ಆರೋಪ ಹಾಗೂ ಲೇಡಿ ರೌಡಿ ಎಂದೇ ಕುಖ್ಯಾತಿ ಪಡೆದಿರುವ ಯಶಸ್ವಿನಿ ಗೌಡ ಅವರನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಮ್ಮುಖದಲ್ಲೇ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಅಧಿಕಾರ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್, ನಮ್ಮ ಸೇನೆಯ ಪದ್ಧತಿ ಪ್ರಕಾರ ಯಶಸ್ವಿನಿ ಅವರನ್ನು ಆಯ್ಕೆ ಮಾಡಲಾಗಿದೆ. ರೌಡಿಶೀಟರ್​ ಅನ್ನೋದು ಇಂದು ಒಂದು ಫ್ಯಾಷನ್​ ಆಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೂಡ ರೌಡಿ ಶೀಟ್​ ಓಪನ್​ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...