alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮೀಯ ಮಾದರಿಯಲ್ಲಿ ಪರಾರಿಯಾದ ಲೇಡಿ ರೌಡಿ

yashaswiniರೌಡಿ ಶೀಟರ್ ಮಹಿಳೆಯೊಬ್ಬಳು ಪೊಲೀಸರು ತನ್ನನ್ನು ಬಂಧಿಸುತ್ತಾರೆಂಬ ಸುಳಿವು ಸಿಗುತ್ತಲೇ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿದ್ದಾಳೆ. ಲೇಡಿ ರೌಡಿ ಯಶಸ್ವಿನಿ, ಪರಾರಿಯಾಗಿರುವ ಆರೋಪಿಯಾಗಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮೀಟರ್ ಬಡ್ಡಿಗೆ ಸಾಲ ನೀಡುತ್ತಿದ್ದ ಬೆಂಗಳೂರಿನ ಯಶಸ್ವಿನಿ ಸಕಾಲಕ್ಕೆ ಬಡ್ಡಿ ನೀಡದಿದ್ದರೆ ಅಂತವರ ಬಳಿಯಿರುವುದನ್ನು ಕಿತ್ತುಕೊಳ್ಳುತ್ತಿದ್ದುದ್ದಲ್ಲದೇ ಪ್ರತಿಭಟಿಸಿದರೆ ಹಲ್ಲೆ ಮಾಡುತ್ತಿದ್ದಳೆಂದು ಹೇಳಲಾಗಿದೆ. ಈಕೆಯ ವಿರುದ್ದ ಈ ಹಿಂದೆಯೇ ರೌಡಿ ಶೀಟ್ ತೆರೆಯಲಾಗಿದ್ದು, ಆದರೂ ಅಟಾಟೋಪ ನಿಂತಿರಲಿಲ್ಲವೆಂದು ಆರೋಪಿಸಲಾಗಿದೆ.

ಬಡ್ಡಿಯ ಹೆಸರಲ್ಲಿ ಕೆಲ ಮಹಿಳೆಯರಿಂದ ತಾಳಿಯನ್ನೂ ಕಿತ್ತುಕೊಂಡಿರುವ ಈಕೆ, ಇತ್ತೀಚೆಗೆ ತಾಯಮ್ಮ ಎಂಬ ಮಹಿಳೆಯನ್ನು ತೀವ್ರವಾಗಿ ಥಳಿಸಿದ್ದಳು. ಈಕೆಯ ರಾಕ್ಷಸಿ ಕೃತ್ಯದಿಂದ ನೊಂದವರೆಲ್ಲರೂ ಪೊಲೀಸರಿಗೆ ದೂರು ನೀಡಿದ್ದು, ತನ್ನ ಬಂಧನವಾಗುವ ವಿಷಯ ಅರಿತ ಯಶಸ್ವಿನಿ, ಎದೆನೋವಿನ ನೆಪ ಹೇಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು.

ಬಳಿಕ ಸಮಯ ಸಾಧಿಸಿದ ಈಕೆ, ಮನೆಯಿಂದ ಬೇರೆ ಬಟ್ಟೆ ತರಿಸಿಕೊಂಡು ತಾನುಟ್ಟಿದ್ದ ಸೀರೆಯನ್ನು ಬಿಚ್ಚಿಟ್ಟು, ಆಸ್ಪತ್ರೆಯ ಕಿಟಕಿ ಮೂಲಕ ಪರಾರಿಯಾಗಿದ್ದಾಳೆ. ಇದೀಗ ಪೊಲೀಸರು ಆಕೆಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...