alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಮಧ್ಯೆಯೇ ಕಣ್ಣೀರಿಟ್ರು ಮಹಿಳಾ ಹೋಮ್ ಗಾರ್ಡ್

ಮಡಿಕೇರಿ: ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ತತ್ತರಗೊಂಡಿರುವ ಕೊಡಗು ಜಿಲ್ಲೆ ಈಗಷ್ಟೇ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಗುಡ್ಡ ಕುಸಿತ, ಪ್ರವಾಹದಿಂದಾಗಿ ಮನೆಕಳೆದುಕೊಂಡ ಅದೆಷ್ಟೋ ಕುಟುಂಬಗಳು ಇನ್ನೂ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ನಿರಾಶ್ರಿತರ ಶಿಬಿರದ ಹೊರಗೆ, ರಸ್ತೆ ಬಂದೋಬಸ್ತ್ ಗಾಗಿ ನೇಮಕಗೊಂಡಿರುವ ಮಹಿಳಾ ಹೋಮ್ ಗಾರ್ಡ್ ಗಳು ರಾತ್ರಿ ವೇಳೆಯೂ ಕರ್ತವ್ಯ ನಿರ್ವಹಿಸುತ್ತಾ, ಕತ್ತಲೆಯಲ್ಲಿ ಕಣ್ಣೀರಿಡುತ್ತಿದ್ದಾರೆ.

ಹೌದು. ಕುಶಾಲನಗರದ ವಾಲ್ಮೀಕಿ ಭವನದ ಮುಖ್ಯ ರಸ್ತೆಯಲ್ಲಿ ಗೃಹ ರಕ್ಷಕದಳದ ಮಹಿಳಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ರಾತ್ರಿಯಾದರೂ ಡ್ಯೂಟಿ ಮುಗಿಸಿ ಮನೆಗೆ ತೆರಳಲು ಅಧಿಕಾರಿಗಳು ಬಿಡುತ್ತಿಲ್ಲ. ರಸ್ತೆ ಮಧ್ಯೆ ಕತ್ತಲೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದು, ರಾತ್ರಿ 8 ಗಂಟೆಯಾದ್ರೂ ರಿಲೀವ್ ಮಾಡದೇ ಕರ್ತವ್ಯ ಮುಂದುವರಿಸಿ ಎಂದು ಅಧಿಕಾರಿಗಳು ಆದೇಶ ನೀಡುತ್ತಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಮಹಿಳಾ ಹೋಮ್ ಗಾರ್ಡ್ ಗಳು ಕಣ್ಣೀರಿಡುತ್ತಿದ್ದಾರೆ.

ಕಾರ್ಗತ್ತಲಲ್ಲೇ ನಿಂತು ಕೆಲಸ ಮಾಡುತ್ತಿದ್ದೇವೆ. ಇಲಾಖೆ ವತಿಯಿಂದಲೂ ನಮಗೆ ಕನಿಷ್ಠ ಪಕ್ಷದ ಟಾರ್ಚ್ ಸಹಾಯವೂ ಇಲ್ಲ. ಬೆಳಗಿನಿಂದ ಸಂಜೆವರೆಗೂ ರಸ್ತೆ ಮಧ್ಯೆ ಡ್ಯೂಟಿ ಮಾಡುತ್ತಿದ್ದು, ರಾತ್ರಿಯಾದರೂ ಮನೆಗೆ ತೆರಳಲು ಆಗುತ್ತಿಲ್ಲ ಎಂದು ಲೇಡಿ ಹೋಮ್ ಗಾರ್ಡ್ ಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...