alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕ ಚುನಾವಣೆ: ಬಿಜೆಪಿ ಆಹ್ವಾನಕ್ಕೆ ಕುಂಬ್ಳೆ, ದ್ರಾವಿಡ್ ಹೇಳಿದ್ದೇನು?

ಕರ್ನಾಟಕ ವಿಧಾಸಭೆ ಚುನಾವಣೆ ಹತ್ತಿರ ಬರ್ತಿದೆ. ಮತದಾರರನ್ನು ಸೆಳೆಯಲು ನಾಯಕರು ಭರ್ಜರಿ ಕಸರತ್ತು ಮಾಡ್ತಿದ್ದಾರೆ. ಯುವಜನತೆಯನ್ನು ಆಕರ್ಷಿಸಲು ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆಯನ್ನು ಬಿಜೆಪಿ ಆಹ್ವಾನಿಸಿತ್ತು. ಆದ್ರೆ ಇಬ್ಬರು ಆಟಗಾರರು ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ಕಳೆದ ಎರಡು ವಾರಗಳಿಂದ ಬಿಜೆಪಿ ಈ ಕೆಲಸದಲ್ಲಿ ನಿರತವಾಗಿತ್ತು. ಯಾವುದೇ ವಿವಾದವಿಲ್ಲದ ಕುಂಬ್ಳೆ ಹಾಗೂ ದ್ರಾವಿಡ್ ಜೊತೆ ಅನೇಕ ಸುತ್ತಿನ ಮಾತುಕತೆ ಕೂಡ ನಡೆದಿದೆ. ಇಬ್ಬರಲ್ಲಿ ಒಬ್ಬರಿಗಾದ್ರೂ ಪಕ್ಷದ ಟಿಕೆಟ್ ಕೊಡಿಸುವ ನಿರ್ಧಾರಕ್ಕೆ ಬಂದಿತ್ತು. ಆದ್ರೆ ಇಬ್ಬರೂ ಆಟಗಾರರು ರಾಜಕೀಯದಿಂದ ದೂರವುಳಿಯಲು ನಿರ್ಧರಿಸಿದ್ದಾರೆ.

ಮೂಲಗಳ ಪ್ರಕಾರ, ಆಹ್ವಾನವನ್ನು ತಿರಸ್ಕರಿಸಿದ್ರೂ ಬಿಜೆಪಿ ಪ್ರಯತ್ನ ಬಿಟ್ಟಿಲ್ಲ. ಇಬ್ಬರಲ್ಲಿ ಒಬ್ಬರನ್ನು ರಾಜ್ಯಸಭೆ ಹಾಗೂ ಇನ್ನೊಬ್ಬರನ್ನು ಲೋಕಸಭೆ ಚುನಾವಣೆಗೆ ಇಳಿಸುವ ಪ್ರಯತ್ನದಲ್ಲಿದೆ. ನಾವು ಭರವಸೆ ಕಳೆದುಕೊಂಡಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...