alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್.ಡಿ.ಕೆ. ಬಳಿ ಇದೆಯಂತೆ ಕೋಟಿ ರೂ. ಬೆಲೆಯ ವಾಚ್

Kumaraswamy _4C--621x414

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದುಬಾರಿ ಬೆಲೆಯ ವಾಚ್ ಕಟ್ಟಿದ್ದಾರೆಂದು ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ವಿರುದ್ದ ತಿರುಗಿ ಬಿದ್ದಿರುವ ಕಾಂಗ್ರೆಸ್ ನಾಯಕರು, ಕುಮಾರಸ್ವಾಮಿಯವರ ಬಳಿಯೂ ಕೋಟಿ ರೂ. ಬೆಲೆಯ ವಾಚ್ ಇದೆ ಎಂದು ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹೆಚ್.ಎಂ. ರೇವಣ್ಣ, ವಿ.ಎಸ್. ಉಗ್ರಪ್ಪ ಮೊದಲಾದ ಕಾಂಗ್ರೆಸ್ ನಾಯಕರು, ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಹೊಂದಿರುವರೆನ್ನಲಾದ ಐಷಾರಾಮಿ ಕಾರುಗಳು ಹಾಗೂ ದುಬಾರಿ ಬೆಲೆಯ ವಾಚುಗಳ ವಿವರವನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಕುಮಾರಸ್ವಾಮಿಯವರು ಈ ಕುರಿತು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕುಮಾರಸ್ವಾಮಿ ಹಾಗೂ ಅವರ ಪುತ್ರನ ಒಡೆತನದಲ್ಲಿ 8 ಕೋಟಿ ರೂ. ಬೆಲೆಯ ಲ್ಯಾಂಬೋರ್ಗಿನಿ, 3 ಕೋಟಿ ರೂ. ಬೆಲೆಯ ರೇಂಜ್ ರೋವರ್ ಹಾಗೂ 1.2 ಕೋಟಿ ರೂ. ಬೆಲೆ ಬಾಳುವ ಇನ್ಫಿನಿಟಿ ಇಎಕ್ಸ್ ಕಾರುಗಳಿವೆ. ಅಲ್ಲದೇ ಕುಮಾರಸ್ವಾಮಿಯವರ ಬಳಿ ಕನಿಷ್ಟ 50 ದುಬಾರಿ ಬೆಲೆಯ ವಾಚ್ ಗಳಿವೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ವೇಳೆ ದುಬೈನಲ್ಲಿ 1.30 ಕೋಟಿ ರೂ. ಬೆಲೆ ಬಾಳುವ ವಾಚನ್ನು ಉಡುಗೊರೆಯಾಗಿ ಪಡೆದಿದ್ದಾರೆಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...