alex Certify
ಕನ್ನಡ ದುನಿಯಾ       Mobile App
       

Kannada Duniya

ಯಡಿಯೂರಪ್ಪ ಹೇಳಿದರೆ ಪ್ರಜಾಪ್ರಭುತ್ವ; ನಾನು ಹೇಳಿದ್ರೆ ಅದು ಪ್ರಜಾಪ್ರಭುತ್ವ ವಿರೋಧಿ…?: ಸಿಎಂ ತಿರುಗೇಟು

ಚಿಕ್ಕಮಗಳೂರು: ದಂಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಕಿ ಹಚ್ಚಲು ಹೇಳಿದರೆ ಅದು ಪ್ರಜಾಪ್ರಭುತ್ವ, ನಾನು ದಂಗೆ ಪದ ಉಪಯೋಗಿಸಿದ್ದಕ್ಕೆ ಅದು ಪ್ರಜಾಪ್ರಭುತ್ವ ವಿರೋಧಿ….ಎಂದು ಕಿಡಿ ಕಾರಿದ್ದಾರೆ.

ಶೃಂಗೇರಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನನ್ನ ವಿರುದ್ಧ ಬಿಜೆಪಿ ನಾಯಕರು ರಾಜ್ಯಪಾಲರಿಗೂ ದೂರು ನೀಡಿದ್ದಾರೆ ಸಂತೋಷ. ಅದಕ್ಕೆ ನಾನು ಉತ್ತರ ಕೊಡುತ್ತೇನೆ. ನನ್ನ ಹೇಳಿಕೆ ಸರಿ-ತಪ್ಪು ಬಗ್ಗೆ ಜನರೇ ತೀರ್ಮಾನಗಳನ್ನು ಮಾಡುತ್ತಾರೆ ಎಂದು ಹೇಳಿದರು.

ಇನ್ನು ಹಾಸನದಲ್ಲಿ ಕರೆದ ಕ್ಯಾಬಿನೆಟ್ ಮೀಟಿಂಗ್ ಕುರಿತು ಮಾತನಾಡಿದ ಅವರು, ಹಾಸನದಲ್ಲಿ ಸಭೆ ನಡೆಸುತ್ತಿರುವುದರಲ್ಲಿ ವಿಶೇಷವೇನಿಲ್ಲ. ಎಲ್ಲಾ ಶಾಸಕರೂ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದೇನೆ. ಮುಂಬೈಗೆ ಹೋಗುತ್ತಿದ್ದಾರಲ್ಲ ಆ ಶಾಸಕರು ಕೂಡ ಬರುತ್ತಾರೆ ಎಂದು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...