alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವರ ಆಸ್ತಿ ಎಷ್ಟು ಗೊತ್ತಾ…?

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ, ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸೋಮವಾರದಂದು ಅನಿತಾ ಕುಮಾರಸ್ವಾಮಿ ತಮ್ಮ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿ ವಿವರದ ಮಾಹಿತಿಯನ್ನು ನೀಡಿದ್ದಾರೆ.

ಅನಿತಾ ಕುಮಾರಸ್ವಾಮಿಯವರು ಒಟ್ಟು 64,22,61,822 ರೂಪಾಯಿ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದು, ಜೊತೆಗೆ 8,14,86,685 ರೂಪಾಯಿ ಸಾಲವನ್ನೂ ಹೊಂದಿದ್ದಾರೆ. ಅವರ ವಾರ್ಷಿಕ ಆದಾಯ 76,35,650 ರೂ. ಗಳೆಂದು ತಿಳಿಸಿದ್ದಾರೆ.

ಅನಿತಾ ಕುಮಾರಸ್ವಾಮಿಯವರ ಬಳಿ 42,36,638 ರೂಪಾಯಿ ನಗದು ಇದ್ದು, ಬ್ಯಾಂಕ್ ಗಳಲ್ಲಿ 1,90,88,775 ರೂ ಠೇವಣಿ ಇಟ್ಟಿದ್ದಾರೆ. 93,30,000 ರೂ ಮೌಲ್ಯದ ಚಿನ್ನಾಭರಣವನ್ನು ಅನಿತಾ ಕುಮಾರಸ್ವಾಮಿಯವರು ಹೊಂದಿದ್ದು, ಒಟ್ಟು 2.6 ಕೆ.ಜಿ. ಚಿನ್ನ, 17 ಕೆ.ಜಿ. ಬೆಳ್ಳಿ ಹಾಗೂ 40 ಕ್ಯಾರೆಟ್ ವಜ್ರವಿದೆ.

ಇದಲ್ಲದೆ ವಿವಿಧ ಕಂಪನಿಗಳು ಹಾಗೂ ಷೇರು ಮಾರುಕಟ್ಟೆ ಮೇಲೆ 68,79,58,000 ರೂ. ಗಳನ್ನು ಅನಿತಾ ಕುಮಾರಸ್ವಾಮಿಯವರು ಹೂಡಿಕೆ ಮಾಡಿದ್ದು, ಜೊತೆಗೆ ಬೆಂಗಳೂರಿನ ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ 14 ಕೋಟಿ ರೂ. ಹಾಗೂ ದೊಡ್ಡನ ಕುಂಟೆ ಬಳಿ 16 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಚುನಾವಣಾ ಪ್ರಚಾರದ ಬಸ್ ಕೂಡ ಅನಿತಾಕುಮಾರಸ್ವಾಮಿಯವರು ಹೊಂದಿದ್ದು, ಜೊತೆಗೆ 8,29,557 ರೂಪಾಯಿ ಮೌಲ್ಯದ ಹಾರ್ಲೆ ಡೇವಿಡ್ಸನ್ ಬೈಕ್ ಕೂಡಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...