alex Certify
ಕನ್ನಡ ದುನಿಯಾ       Mobile App
       

Kannada Duniya

ಶನಿವಾರ ಅಥವಾ ಭಾನುವಾರ ನೂತನ ಸಚಿವರ ಪ್ರಮಾಣವಚನ…!

ಪ್ರಮುಖ ಖಾತೆಗಳ ಹಂಚಿಕೆ ಮಾಡುವ ಬಗ್ಗೆ ಅಂತಿಮ ಸುತ್ತಿನ ಮಾತುಕತೆ ನಡೆಯುತ್ತಿದ್ದು, ಶನಿವಾರ ಅಥವಾ ಭಾನುವಾರ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಖಾತೆ ಹಂಚಿಕೆಯ ಬಗ್ಗೆಯೂ ಚರ್ಚೆಸಲಾಗುತ್ತಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಇಂದು ಮಹತ್ವದ ಚರ್ಚೆ ನಡೆಸಲಿವೆ. ಇನ್ನೆರಡು ದಿನಗಳಲ್ಲಿ ಇಂಧನ, ಲೋಕೋಪಯೋಗಿ, ನೀರಾವರಿ, ಹಣಕಾಸು ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಬೃಹತ್ ಕೈಗಾರಿಕೆ ಖಾತೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ಪ್ರಮುಖ ಖಾತೆಗಳ ಹಂಚಿಕೆ ಬಗ್ಗೆ ಮಹತ್ವದ ಸಭೆ ಇಂದು ಸಂಜೆ ನಡೆಯಲಿದ್ದು, ಉಭಯ ಪಕ್ಷಗಳ ನಾಯಕರ ಜೊತೆ ಸೇರಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಯಾರ್ಯಾರಿಗೆ ಯಾವ ಯಾವ ಖಾತೆಗಳನ್ನು ನೀಡಬೇಕು ಎಂಬ ವಿಚಾರವಾಗಿ ಈಗಾಗಲೇ ಚರ್ಚೆಗಳು ನಡೆದು ಅಂತಿಮ ಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದ್ದು, ಈ ಎಲ್ಲಾ ನಾಯಕರು ಒಮ್ಮತದಿಂದ ಒಪ್ಪಿಗೆ ಸೂಚಿಸಬೇಕಾಗಿದೆ ಅಷ್ಟೇ.

ಈ ಹಿನ್ನೆಲೆಯಲ್ಲಿ ಶನಿವಾರ ಅಥವಾ ಭಾನುವಾರ ಪ್ರಮಾಣವಚನ ಸ್ವೀಕಾರ ಸಮಾರಂಭ ಆಯೋಜಿಸುವ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ. ಈ ಹಿಂದೆ ರಾಜ್ಯದಲ್ಲಿ ಸಚಿವರಾಗಿ ಅತ್ಯುತ್ತಮವಾಗಿ ತಮ್ಮ ಖಾತೆಯನ್ನು ನಿಭಾಯಿಸಿ ಸಮರ್ಥ ಹಾಗೂ ಪರಿಣಾಮಕಾರಿ ಆಡಳಿತ ನೀಡಿದ ಅನುಭವಸ್ಥರಿಗೆ ಅದೇ ಖಾತೆಗಳನ್ನೇ ನೀಡಬೇಕಾ ಅಥವಾ ಹೊಸಬರಿಗೆ ಖಾತೆಯನ್ನು ಕೊಡಬೇಕಾ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...