alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖ್ಯಮಂತ್ರಿ ಹೇಳಿಕೆ ಖಂಡಿಸಿ ಇಂದು ಖಾನಾಪುರ ಪಟ್ಟಣ ಬಂದ್

ಬೆಳಗಾವಿಯಲ್ಲಿ ಪ್ರತಿಭಟನಾನಿರತರಾಗಿದ್ದ ರೈತ ಮಹಿಳೆ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ಇಂದು ಖಾನಾಪುರ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.

ಹಸಿರು ಸೇನೆ ಘಟಕ ಈ ಬಂದ್ ಗೆ ಕರೆ ನೀಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಹೇಳಿಕೆಗೆ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಪ್ರತಿಭಟನಾ ನಿರತರಾಗಿದ್ದ ರೈತರು ಸುವರ್ಣ ಸೌಧದ ಗೇಟಿನ ಬೀಗ ಹೊಡೆದು ಕಬ್ಬಿನ ಲಾರಿ ಒಳ ನುಗ್ಗಿಸಿದ್ದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ಅವರುಗಳು ರೈತರಲ್ಲ, ಗೂಂಡಾಗಳು ಎಂದು ಹೇಳಿದ್ದರು.

ಅಲ್ಲದೆ ಮಾಧ್ಯಮಗಳ ಮುಂದೆ ತಮ್ಮನ್ನು ಪ್ರಶ್ನಿಸಿದ್ದ ರೈತ ಮಹಿಳೆ ಜಯಶ್ರೀ ಅವರ ಕುರಿತು, 4 ವರ್ಷಗಳ ಕಾಲ ನೀನು ಎಲ್ಲಿ ಮಲಗಿದ್ದಿಯಮ್ಮ ಎಂದು ಮುಖ್ಯಮಂತ್ರಿಗಳು ಕೇಳಿದ್ದು, ರೈತ ಸಮುದಾಯದಲ್ಲಿ ಆಕ್ರೋಶ ಮೂಡಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...