alex Certify
ಕನ್ನಡ ದುನಿಯಾ       Mobile App
       

Kannada Duniya

ಖಾಸಗಿ ವಾಹನದಲ್ಲಿ ಸಿಎಂ ಏಕಾಏಕಿ ಪ್ರಯಾಣ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಇನ್ನೂ ಅಸಮಾಧಾನದ ಹೊಗೆ ಆಡುತ್ತಲೇ ಇದೆ.

ಹಲವು ಗೊಂದಲಗಳು ಇನ್ನೂ ತಲೆದೋರುತ್ತಲೇ ಇವೆ. ಸರ್ಕಾರ ಉಳಿಯುತ್ತೋ ಉರುಳುತ್ತೋ ಎಂಬ ತೂಗುಗತ್ತಿ ನೆತ್ತಿ ಮೇಲೆ ತೂಗುತ್ತಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಸಂಜೆ ಏಕಾಏಕಿ ತಮ್ಮ ಖಾಸಗಿ ವಾಹನದಲ್ಲಿ ಬೆಂಗಾವಲು, ಪೊಲೀಸ್ ಭದ್ರತೆ ಇಲ್ಲದೆ ಇದ್ದಕ್ಕಿದ್ದಂತೆ ದೇವನಹಳ್ಳಿ ರಸ್ತೆಯತ್ತ ಹೊರಟಿದ್ದಾದರೂ ಏಕೆ ಎಂಬ ಪ್ರಶ್ನೆ ಈಗ ರಾಜ್ಯ ರಾಜಕಾರಣದಲ್ಲಿ ಕಾಡುತ್ತಿದೆ.

ಮಾಹಿತಿಗಳ ಪ್ರಕಾರ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೇವನಹಳ್ಳಿ ಸಮೀಪದ ಖಾಸಗಿ ರೆಸಾರ್ಟ್ ಒಂದರಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ರಹಸ್ಯ ಸಭೆ ನಡೆಸಲಿದ್ದಾರಂತೆ.

ಓರ್ವ ಮುಖ್ಯಮಂತ್ರಿಯಾಗಿ ಬೆಂಗಾವಲು ವಾಹನವೂ ಇಲ್ಲದೆ ಏಕಾಏಕಿ ಕಾಂಗ್ರೆಸ್ ಮುಖಂಡರು ಇರುವ ಕಡೆ ಖುದ್ದಾಗಿ ಹೋಗಿ, ಸಭೆ ನಡೆಸುವಂತಹ ವಿಷಯವಾದರೂ ಏನಿರಬಹುದು ಎಂಬ ಕುತೂಹಲ ಈಗ ಮೂಡಿದೆ.

ಏಕಾಏಕಿ ಈ ರೀತಿಯ ಮುಖ್ಯಮಂತ್ರಿಗಳ ಪ್ರಯಾಣ ಸಾರ್ವಜನಿಕರಿಗೂ ಶಾಕ್ ನೀಡುವ ಜೊತೆಗೆ, ಸರ್ಕಲ್ ಗಳಲ್ಲಿನ ಸಂಚಾರಿ ಪೊಲೀಸರಲ್ಲೂ ಸಹ ಇರುಸು ಮುರುಸು ಉಂಟು ಮಾಡಿದೆ. ಕಾಂಗ್ರೆಸ್ನ ಹಲವು ಪ್ರಮುಖ ನಾಯಕರು ಈ ಮಹತ್ವದ ಸಭೆಗೆ ಹಾಜರಾಗುತ್ತಿರುವ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...