alex Certify
ಕನ್ನಡ ದುನಿಯಾ       Mobile App
       

Kannada Duniya

ಕುಮಾರಸ್ವಾಮಿ ವಾಸವಾಗಿದ್ದ ಹುಬ್ಬಳ್ಳಿ ಮನೆ ಮಾರಾಟಕ್ಕೆ…!

ಹುಬ್ಬಳ್ಳಿ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಸವಾಗಿದ್ದ ಮನೆ ಮಾರಾಟಕ್ಕೆ…! ಈ ಸುದ್ದಿ ನೋಡಿ ಶಾಕ್ ಆದ್ರರಾ…?ಗಾಬರಿ ಆಗೋ ಅಗತ್ಯವಿಲ್ಲ. ಸಿಎಂ ಕುಮಾರಸ್ವಾಮಿಯವರು ವಾಸವಾಾಾಗಿದ್ದ ಹುಬ್ಬಳ್ಳಿಯ ನಿವಾಸವನ್ನು ಅದರ ಮಾಲೀಕರು ಈಗ ಮಾರಾಟ ಮಾಡಲು ಹೊರಟಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ವಾಣಿಜ್ಯ ನಗರಿ ಹುಬ್ಬಳ್ಳಿಯ ಮಾಯ್ಕಾರ್ ಕಾಲೋನಿಯಲ್ಲಿ 2016ರ ನವೆಂಬರ್ ನಲ್ಲಿ ಒಂದು ಮನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಅಂದು ಈ ಮನೆಗೆ ಅದ್ಧೂರಿಯಾಗಿ ಗೃಹ ಪ್ರವೇಶ ಕೂಡ ಮಾಡಿದ್ದರು. ಉತ್ತರ ಕರ್ನಾಟಕ ಜನರೊಂದಿಗೆ ನಿಕಟ ಸಂಪರ್ಕ ಬೆಳೆಸಲು ಈ ಮನೆಯನ್ನು ಕುಮಾರಸ್ವಾಮಿ ಆರಿಸಿಕೊಂಡಿದ್ದರು.
ಆದರೆ ಈಗ ಈ ಮನೆಯ ಮಾಲೀಕರು ವೈಯಕ್ತಿಕ ಕಾರಣಕ್ಕಾಗಿ ಮಾರಾಟ ಮಾಡಲು ಉದ್ದೇಶ ಹೊಂದಿದ್ದಾರೆ. ಸುಸಜ್ಜಿತವಾದ ಈ ಮನೆ 10 ಸಾವಿರ ಚದರಡಿಯ ನಾಲ್ಕು ಬೆಡ್ ರೂಮ್, ಪೂಜಾ ಕೋಣೆ, ಜಿಮ್, ಕಛೇರಿ ಸೇರಿದಂತೆ ಸಕಲ ಸೌಕರ್ಯಗಳನ್ನೂ ಹೊಂದಿದೆ.
ಈ ಕುರಿತು ಪ್ರತಿಕ್ರಿಸಿರುವ ಮಾಲೀಕ ಸುರೇಶ್ ರಾಯರೆಡ್ಡಿ, ನನ್ನ ವೈಯಕ್ತಿಕ ಕಾರಣದಿಂದಾಗಿ ಕುಮಾರಸ್ವಾಮಿಯವರು ಬಳಸುತ್ತಿದ್ದ ಮನೆ ಹಾಗೂ ಕಚೇರಿಯನ್ನು ಮಾರಾಟ ಮಾಡುತ್ತಿದ್ದೇನೆ. ಒಟ್ಟು ನಾಲ್ಕು ಕೋಟಿ ರೂ.ಗೆ ಈ ನಿವಾಸವನ್ನು ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...