alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನ ಮುಗ್ದ ನಗು ಕಂಡು ಹೆಚ್.ಡಿ.ಕೆ. ಕಣ್ಣಂಚಲ್ಲಿ ನೀರು

ಬೆಂಗಳೂರಿನಲ್ಲಿ ಬುಧವಾರದಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಆಟೋ, ಕಾರು, ಲಾರಿ ಚಾಲಕರು ಮತ್ತು ಮಾಲೀಕರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮ ಭಾವನಾತ್ಮಕ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.

ವರ್ಷದ ಹಿಂದೆ ಮಾರಣಾಂತಿಕ ಕಾಯಿಲೆಯಿಂದ ಮಗುವೊಂದು ಬಳಲುತ್ತಿದ್ದ ವೇಳೆ ಮಗುವಿನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕುಮಾರಸ್ವಾಮಿಯವರು ಭರಿಸಿದ್ದು, ಇದೀಗ ಆ ಮಗು ಚೇತರಿಸಿಕೊಂಡಿದ್ದು, ಕೃತಜ್ಞತೆ ಸಲ್ಲಿಸುವ ಸಲುವಾಗಿ ಆಕೆಯ ಪೋಷಕರು ಮಗುವಿನೊಂದಿಗೆ ಬಂದಿದ್ದು, ಮಗುವಿನ ಮುಖದಲ್ಲಿನ ನಗು ಕಂಡ ಕುಮಾರಸ್ವಾಮಿಯವರ ಕಣ್ಣಂಚು ಸಾರ್ಥಕ ಭಾವದಿಂದ ತೇವಗೊಂಡಿದೆ.

ಮೂಲತಃ ಹೊಸಪೇಟೆಯ ಎಮ್ಮಂಡಹಳ್ಳಿಯ ಆಟೋಚಾಲಕ ಸಂಪಂಗಿ ಹಾಗೂ ಅವರ ಪತ್ನಿ ಸಂಧ್ಯಾರಾಣಿ ತಮ್ಮ ಮಗಳು ಮೋನಿಕಾ ಕಾಯಿಲೆಯಿಂದ ಬಳಲುತ್ತಿದ್ದುದ್ದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದರು. ಪರಿಶೀಲಿಸಿದ ವೈದ್ಯರು ತಕ್ಷಣ ಚಿಕಿತ್ಸೆ ಕೊಡಿಸದಿದ್ದರೆ ಮಗು ಉಳಿಯುವುದಿಲ್ಲ. ಚಿಕಿತ್ಸಾ ವೆಚ್ಚ 31 ಲಕ್ಷ ರೂ. ಗಳಾಗುತ್ತದೆಂದು ಹೇಳಿದಾಗ ದಂಪತಿಗಳು ಕುಸಿದು ಹೋಗಿದ್ದರು.

ನೆರವಿಗಾಗಿ ಹಲವರ ಬಳಿ ಮೊರೆಯಿಟ್ಟರೂ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಅಂತಿಮವಾಗಿ ಕುಮಾರಸ್ವಾಮಿಯವರ ಬಳಿ ದಂಪತಿಗಳು ಬಂದಿದ್ದು, ಇದಕ್ಕೆ ತಕ್ಷಣವೇ ಸ್ಪಂದಿಸಿದ ಅವರು, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಿದ್ದರು. ಇದೀಗ ಮಗು ಗುಣಮುಖವಾಗಿರುವುದನ್ನು ಕಂಡು ಕುಮಾರಸ್ವಾಮಿಯವರ ಕಣ್ಣಲ್ಲಿ ಆನಂದಭಾಷ್ಪ ಹರಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...