alex Certify
ಕನ್ನಡ ದುನಿಯಾ       Mobile App
       

Kannada Duniya

ಉನ್ನತ ಶಿಕ್ಷಣ ಸಚಿವರಾಗಿಯೇ ಕಾರ್ಯ ನಿರ್ವಹಿಸಲಿದ್ದಾರೆ ಜಿ.ಟಿ. ದೇವೇಗೌಡ

ತಮಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದರಿಂದ ಮುನಿಸಿಕೊಂಡು ಇದುವರೆಗೂ ಖಾತೆ ವಹಿಸಿಕೊಳ್ಳದಿದ್ದ ಸಚಿವ ಜಿ.ಟಿ. ದೇವೇಗೌಡ ಕೊನೆಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮನವೊಲಿಕೆಗೆ ಮಣಿದಿದ್ದು, ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆಂದು ತಿಳಿದು ಬಂದಿದೆ.

ಲೋಕೋಪಯೋಗಿ ಖಾತೆಯನ್ನು ಬಯಸಿದ್ದ ಜಿ.ಟಿ. ದೇವೇಗೌಡರು ಅದು ಹೆಚ್.ಡಿ. ರೇವಣ್ಣನವರ ಪಾಲಾಗುವುದು ಖಚಿತವಾಗುತ್ತಿದ್ದಂತೆಯೇ ಮತ್ತೊಂದು ಪ್ರಮುಖ ಖಾತೆಗಾಗಿ ಬೇಡಿಕೆ ಇಟ್ಟಿದ್ದರು.

ಆದರೆ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದು, ಇದರಿಂದ ಬೇಸರಗೊಂಡಿದ್ದ ಜಿ.ಟಿ. ದೇವೇಗೌಡ ಇದುವರೆಗೂ ತಮಗೆ ನೀಡಿದ್ದ ಖಾತೆಯನ್ನು ವಹಿಸಿಕೊಂಡಿರಲಿಲ್ಲ.

ಇದೀಗ ಖಾತೆಯನ್ನು ವಹಿಸಿಕೊಳ್ಳುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಿ.ಟಿ. ದೇವೇಗೌಡರ ಮನವೊಲಿಸಿದ್ದಾರೆನ್ನಲಾಗಿದ್ದು, ಅದಕ್ಕೆ ಸಮ್ಮತಿಸಿದ್ದಾರೆನ್ನಲಾಗಿದೆ. ನಾಳೆ ಅಧಿಕೃತವಾಗಿ ತಮ್ಮ ಖಾತೆಯನ್ನು ವಹಿಸಿಕೊಳ್ಳಲಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...