alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಆಗಿದ್ದರ ಹಿಂದಿನ ‘ರಹಸ್ಯ’ ಬಿಚ್ಚಿಟ್ಟ ಕುಮಾರಸ್ವಾಮಿ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಾವು ಸಿಎಂ ಸ್ಥಾನಕ್ಕೆ ಏರಲು ಕಾರಣವಾಗಿದ್ದು ಏನು ಎಂಬುದರ ರಹಸ್ಯ ಬಿಚ್ಚಿಟ್ಟಿದ್ದಾರೆ. ತಲಕಾವೇರಿಯ ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದ ಸಿಎಂ, ನಂತರ ಈ ವಿಷಯ ತಿಳಿಸಿದ್ದಾರೆ.

ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತೇವೆಂಬ ಮೂಢ ನಂಬಿಕೆಯಿಂದ ಇದುವರೆಗೂ ರಾಜ್ಯದ ಯಾವ ಮುಖ್ಯಮಂತ್ರಿಗಳು ಇಲ್ಲಿಗೆ ಭೇಟಿ ನೀಡಿರಲಿಲ್ಲ. ಆದರೆ ಬುಧವಾರದಂದು ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿಯವರು, ನಾನು ಈ ಹಿಂದೆ ತಲಕಾವೇರಿಗೆ ಬಂದು ಹೋಗಿದ್ದರಿಂದಲೇ ಇಂದು ಮುಖ್ಯಮಂತ್ರಿಯಾಗಿದ್ದೇನೆ ಎಂಬ ರಹಸ್ಯ ಬಿಚ್ಚಿಟ್ಟಿದ್ದಾರೆ.

ಬುಧವಾರ ಸಂಜೆ 6.43 ರ ತುಲಾ ಸಂಕ್ರಮಣ ಕಾಲದಲ್ಲಿ ತೀರ್ಥೋದ್ಭವವಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ತಲಕಾವೇರಿಯಲ್ಲಿ ನೆರೆದಿದ್ದರು. ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣಾಚಾರ್ ನೇತೃತ್ವದ 25 ಅರ್ಚಕರ ತಂಡ ತೀರ್ಥೋದ್ಭವ ಪೂಜೆಯನ್ನು ನೆರವೇರಿಸಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...