alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಧನ ಬೇಡಿಕೆ, ಬಳಕೆ ಕುರಿತ ವೆಬ್ ಟೂಲ್ ಬಿಡುಗಡೆ ಮಾಡಿದ ಸಿಎಂ

ಭಾರತದಲ್ಲಿ ಬ್ರಿಟಿಷ್ ಹೈಕಮಿಷನರ್ ಡಾಮಿನಿಕ್ ಆಸ್ಕ್ವಿತ್ ಕೆಸಿಎಂಜಿ ಅವರು ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ನಂತರ ಯುಕೆ ಸರ್ಕಾರದ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿರುವ ಕರ್ನಾಟಕ ಸ್ಟೇಟ್ ಎನರ್ಜಿ ಕ್ಯಾಲ್ಕ್ಯುಲೇಟರ್ 2050 ವೆಬ್ ಟೂಲ್ ಅನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಟಿಷ್ ಹೈಕಮಿಷನರ್ ಡಾಮಿನಿಕ್ ಆಸ್ಕ್ವಿತ್, ಆಂಧ್ರಪ್ರದೇಶ, ಗುಜರಾತ್ ಹಾಗೂ ಅಸ್ಸಾಂ ನಂತರ ಎನರ್ಜಿ ಕ್ಯಾಲ್ಕ್ಯುಲೇಟರ್ ರೂಪಿಸಿದ ನಾಲ್ಕನೇ ರಾಜ್ಯ ಕರ್ನಾಟಕ. ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿಯೂ ಎನರ್ಜಿ ಕ್ಯಾಲ್ಕ್ಯುಲೇಟರ್ ಸಿದ್ಧವಾಗುತ್ತಿದೆ. ಇದರಿಂದ ಇಂಧನ ಭದ್ರತೆ, ಇಂಧನ ಬಳಕೆ ಕುರಿತ ಯೋಜನೆ ರೂಪಿಸಲು ಅನುಕೂಲವಾಗಲಿದೆ ಎಂದು ವಿವರಿಸಿದರು.

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಇಂಧನ ಬಳಕೆ, ಇಂಗಾಲದ ಹೆಜ್ಜೆ ಗುರುತು ಲೆಕ್ಕಹಾಕಲು ಅನುಕೂಲವಾಗಲಿದೆ. ಇದನ್ನು ರಾಜ್ಯದ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ ಎಂದು ಅಭಿನಂದಿಸಿದರು. ಪಾವಗಡದಲ್ಲಿ ಸ್ಥಾಪಿಸಲಾಗಿರುವ ಸೋಲಾರ್ ಪಾರ್ಕ್ ನಲ್ಲಿ ಯು.ಕೆ. ಸಹಭಾಗಿತ್ವವನ್ನು ಸ್ಮರಿಸಿಕೊಂಡ ಅವರು, ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಇನ್ನಷ್ಟು ಯೋಜನೆಗಳಿಗೆ ಕೈಜೋಡಿಸುವುದಾಗಿ ತಿಳಿಸಿದರು.

ನೀತಿ ಆಯೋಗವು 2015 ರಲ್ಲಿ ಯುಕೆ ಸಹಯೋಗದೊಂದಿಗೆ ಅಭಿವೃದ್ದಿಪಡಿಸಿದ ಇಂಡಿಯಾ ಎನರ್ಜಿ ಸೆಕ್ಯುರಿಟಿ ಸಿನಾರಿಯೋ 2047 ವೆಬ್ ಟೂಲ್‍ನ ಮಾದರಿಯಲ್ಲಿ ರಾಜ್ಯಮಟ್ಟದಲ್ಲಿ ಎನರ್ಜಿ ಕ್ಯಾಲ್ಕ್ಯುಲೇಟರ್ ರೂಪಿಸಲಾಗಿದೆ.

ಇದೇ ಸಂದರ್ಭದಲ್ಲಿ ಬ್ರಿಟಿಷ್ ಕೌನ್ಸಿಲ್‍ನ 70 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ಯು.ಕೆ.ಯಲ್ಲಿ ಒಂದು ವರ್ಷದ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತಶಾಸ್ತ್ರ) ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‍ಗಾಗಿ ವಿದ್ಯಾರ್ಥಿ ವೇತನ ನೀಡುವ ಯೋಜನೆಯಡಿ ಆಯ್ಕೆಯಾದ 100 ಅಭ್ಯರ್ಥಿಗಳಲ್ಲಿ 15 ಮಹಿಳೆಯರು ಕರ್ನಾಟಕದವರು. ಈ ಯುವತಿಯರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.

ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಡಾಮಿನಿಕ್ ಮ್ಯಾಕ್‍ಅಲಿಸ್ಟರ್, ಬ್ರಿಟಿಷ್ ಕೌನ್ಸಿಲ್‍ನ ಅಧಿಕಾರಿಗಳು, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...