alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸ, ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಬೇಸಿಗೆ ರಜೆ, ವೀಕೆಂಡ್ ರಜೆ ಹಿನ್ನಲೆಯಲ್ಲಿ  ಪ್ರವಾಸ, ಮತದಾನ ಮಾಡಲು ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ.

ವಾರಾಂತ್ಯ ಹಾಗೂ ಹಬ್ಬದ ದಿನಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಐಷಾರಾಮಿ ಬಸ್ ಗಳಲ್ಲಿ ಟಿಕೆಟ್ ದರವನ್ನು ಹೆಚ್ಚು ಮಾಡಲಾಗುತ್ತದೆ. ಸಾಮಾನ್ಯ ದರ ಶೇ. 20 ರಷ್ಟು ಏರಿಕೆ ಮಾಡಲಾಗುತ್ತದೆ. ಹೊರ ರಾಜ್ಯಗಳಿಗೆ ಸಂಚರಿಸುವ ಐಷಾರಾಮಿ ಬಸ್ ಗಳ ದರವನ್ನು ಕೂಡ ಏರಿಕೆ ಮಾಡಲಾಗುತ್ತದೆ.

ಪ್ರಸ್ತುತ ಬೇಸಿಗೆ ರಜೆ ಇರುವುದದಿಂದ ಮಕ್ಕಳೊಂದಿಗೆ ಊರಿಗೆ ಹೋಗಿ ಮತದಾನ ಮಾಡಲು ಮುಂದಾದವರಿಗೆ ಟಿಕೆಟ್ ಬೆಲೆ ಏರಿಕೆ ಬಿಸಿ ತಟ್ಟಿದೆ. ಖಾಸಗಿ ಬಸ್ ಗಳಲ್ಲಿಯೂ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಪ್ರಯಾಣಿಕರಿಲ್ಲದೇ ಬಣಗುಡುತ್ತಿದ್ದ ಬಸ್ ಗಳು ಈ ವಾರಕ್ಕೆ ಮೊದಲೇ ಬುಕ್ ಆಗಿವೆ.

ಬೆಂಗಳೂರಿನಲ್ಲಿ ನೆಲೆಸಿರುವ ಮತದಾರರನ್ನು ಊರಿಗೆ ಕರೆಸಿಕೊಳ್ಳಲು ಕೆಲವು ಅಭ್ಯರ್ಥಿಗಳು ಕೃಪೆ ತೋರಿದ್ದಾರೆ. ಮೊದಲೇ ಸೀಟುಗಳನ್ನು ಕಾಯ್ದಿರಿಸಿ ತಮ್ಮ ಮತದಾರರನ್ನು ಊರಿಗೆ ಕರೆಸಿಕೊಳ್ಳುತ್ತಿದ್ದಾರೆ.

ಆದರೆ, ಬುಕ್ ಮಾಡದೇ ಬಸ್ ಹತ್ತಲು ಹೋದವರಿಗೆ ಶಾಕ್ ಆಗುವುದು ಗ್ಯಾರಂಟಿ. ಟಿಕೆಟ್ ದರದಲ್ಲಿ ಭಾರೀ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 400 -450 ರೂ. ದರ ಇದ್ದರೆ, ಮೇ 11 ರಂದು 900 -1,100 ರೂ. ದರ ನಿಗದಿಯಾಗಿದೆ.

ಪ್ರವಾಸ, ಮತದಾನಕ್ಕೆ ಊರಿಗೆ ತೆರಳುವವರ ಸಂಖ್ಯೆ ಜಾಸ್ತಿಯಾಗಿರುವುದರಿಂದ ಖಾಸಗಿ ಬಸ್ ಗಳ ಪ್ರಯಾಣ ದರ ಜಾಸ್ತಿಯಾಗಿದೆ. ಇದರಿಂದಾಗಿ ಊರಿಗೆ ತೆರಳುವವರು ದುಬಾರಿ ಬೆಲೆ ತೆರುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...