alex Certify
ಕನ್ನಡ ದುನಿಯಾ       Mobile App
       

Kannada Duniya

ಜಫ್ತಿಯಾಯ್ತು ಕೆ.ಎಸ್.ಆರ್.ಟಿ.ಸಿ. ಬಸ್

ದಾವಣಗೆರೆ: ಪರಿಹಾರ ನೀಡದ ಕಾರಣ ಕೆ.ಎಸ್.ಆರ್.ಟಿ.ಸಿ. ಬಸ್ ಜಫ್ತಿ ಮಾಡಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ನಡೆದಿದೆ.

ಅಪಘಾತ ಪ್ರಕರಣದಲ್ಲಿ ವಾದಿಗಳಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ, ಪರಿಹಾರದ ಮೊತ್ತ ನೀಡದ ಕಾರಣ ಕೋರ್ಟ್ ಸಿಬ್ಬಂದಿ ಬಸ್ ಜಫ್ತಿ ಮಾಡಿದ್ದಾರೆ.

2009 ರ ಜನವರಿ 5 ರಂದು ಹಾವೇರಿ ಮತ್ತು ಜೋಡೆತ್ತಿನ ಬಂಡಿ ನಡುವೆ ಸಂಭವಿಸಿದ ಅಪಘಾತದಲ್ಲಿ ಹನಗವಾಡಿ ಗ್ರಾಮದ ರೈತ ನಾಗರಾಜಪ್ಪ ಮೃತಪಟ್ಟಿದ್ದರು. ಅಪಘಾತದಲ್ಲಿ 1 ಎತ್ತು ಕೂಡ ಮೃತಪಟ್ಟು ಮತ್ತೊಂದು ಎತ್ತು ಗಾಯಗೊಂಡಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಹರಿಹರದ ಹಿರಿಯ ಸಿವಿಲ್ ನ್ಯಾಯಾಲಯ ಪರಿಹಾರ ನೀಡಲು ಆದೇಶಿಸಿತ್ತು. ಈ ತೀರ್ಪನ್ನು ಕೆ.ಎಸ್.ಆರ್.ಟಿ.ಸಿ. ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿದ್ದರಿಂದ ಸಂಸ್ಥೆ ಭಾಗಶಃ ಪರಿಹಾರವನ್ನು ನೀಡಿತ್ತು.

ಹಲವು ವರ್ಷಗಳಾದರೂ ಬಾಕಿ ಪರಿಹಾರದ ಮೊತ್ತವನ್ನು ನೀಡದ ಕಾರಣ ಕೋರ್ಟ್ 2017 ರ ಸೆಪ್ಟಂಬರ್ 18 ರಂದು ಬಸ್ ಜಫ್ತಿ ಮಾಡಲು ಆದೇಶಿಸಿದೆ.

ಅದರಂತೆ ಬೆಂಗಳೂರು ಕಡೆಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಜಫ್ತಿ ಮಾಡಿದ ಕೋರ್ಟ್ ಸಿಬ್ಬಂದಿ ಕೋರ್ಟ್ ಆವರಣಕ್ಕೆ ತಂದಿದ್ದಾರೆ. ಬಸ್ ನಲ್ಲಿದ್ದ ಪ್ರಯಾಣಿಕರು ಬೇರೆ ಬಸ್ ನಲ್ಲಿ ಪ್ರಯಾಣ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...