alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷ್ಣಾ ನದಿಯಲ್ಲಿ ಬಿದ್ದು ತಂದೆ- ಮಗಳ ಸಾವು

ಮಗಳೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ತಂದೆಯೊಬ್ಬರು ಮಗಳು ಆಯತಪ್ಪಿ ನದಿಗೆ ಬಿದ್ದ ವೇಳೆ ಆಕೆಯ ರಕ್ಷಣೆಗೆ ಹೋಗಿದ್ದು, ಆದರೆ ಈ ಪ್ರಯತ್ನ ವಿಫಲವಾಗಿ ತಂದೆ- ಮಗಳು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದ ಬಳಿ ಈ ದಾರುಣ ಘಟನೆ ನಡೆದಿದ್ದು ದಸ್ತಗಿರಿ ಗೌಂಡಿ ಎಂಬವರು ತಮ್ಮ ಮೂರು ವರ್ಷದ ಮಗಳು ಆನಮ್ ಳನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಆಕೆ ಆಯತಪ್ಪಿ ಸೇತುವೆ ಮೇಲಿನಿಂದ ನದಿಗೆ ಬಿದ್ದಿದ್ದಾಳೆ.

ದಸ್ತಗಿರಿ ಮಗಳನ್ನು ರಕ್ಷಿಸುವ ಸಲುವಾಗಿ ನದಿಗೆ ಧುಮುಕಿದ್ದು, ಆದರೆ ಇದು ಫಲಕಾರಿಯಾಗದೆ ತಂದೆ-ಮಗಳು ಸಾವನ್ನಪ್ಪಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...