alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ: ಉಡುಪಿಯಲ್ಲಿ ಭಕ್ತ ಸಾಗರ

ಉಡುಪಿ: ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕೃಷ್ಣನ ಊರಾದ ಉಡುಪಿಯಲ್ಲಿ ವಿಶೇಷ ಪೂಜೆಗಳ ಮೂಲಕ ವೈಭವದಿಂದ ಕೃಷ್ಣ ಜನ್ಮಾಷ್ಟಮಿ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾವಿರಾರು ಕೃಷ್ಣ ಭಕ್ತರು ಕೃಷ್ಣ ಮಠಕ್ಕೆ ಆಗಮಿಸುತ್ತಿದ್ದಾರೆ.

ಕೃಷ್ಣಮಠವನ್ನು ಹೂವಿನಿಂದ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜೆ, ಪುನಸ್ಕಾರ, ಭಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಇಂದು ಉಪವಾಸ ವೃತದಲ್ಲಿರುವ ಕೃಷ್ಣಭಕ್ತರು, ರಾತ್ರಿ 11.45 ಕ್ಕೆ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡುತ್ತಾರೆ. ಈ ಮೂಲಕ ಶ್ರೀಕೃಷ್ಣನ ಜನ್ಮವಾಗುತ್ತದೆ ಎಂಬುದು ಪ್ರತೀತಿ.

ಇನ್ನು ನಾಳೆ ಉಡುಪಿ ಮಠದಲ್ಲಿ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ಶ್ರೀ ಕೃಷ್ಣ ಲೀಲೋತ್ಸವದ ಮೆರವಣಿಗೆ ಶ್ರೀ ಕೃಷ್ಣ ಕಲ್ಯಾಣ ಮಂಟಪದಿಂದ ಹೊರಟು ಬಾಳಿಗಾ ಕ್ರಾಸಿನಿಂದ ವರ್ಣೇಕರ ಪ್ಲಾಜಾ ಎದುರು ಮಾರ್ಗವಾಗಿ ಮರಳಿ ಶ್ರೀ ಕೃಷ್ಣ ಕಲ್ಯಾಣ ಮಂಟಪ ಬಂದು ತಲುಪಲಿದೆ. ಮಠಕ್ಕೆ ಬರುವ ಭಕ್ತರಿಗಾಗಿ ವಿತರಿಸಲು 2 ಲಕ್ಷ ಲಡ್ಡು, 1 ಲಕ್ಷ ಚಕ್ಕುಲಿ ಪ್ರಸಾದ ಸಿದ್ಧವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...