alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ನೌಕರರಿಗೆ ಸಿಗಲಿದೆ 45 ದಿನ ರಜೆ

ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲಿಯೇ ಕೆ.ಪಿ.ಟಿ.ಸಿ.ಎಲ್. ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ನೀಡಲು ನಿರ್ಧರಿಸಲಾಗಿದೆ.

ವಿಶೇಷ ಚೇತನ ಮಕ್ಕಳ ಅಮ್ಮಂದಿರಿಗೆ ಈ ಸೌಲಭ್ಯವಿದ್ದು, ವಾರ್ಷಿಕ ಗರಿಷ್ಠ 45 ದಿನ ಹಾಗೂ ಸೇವಾವಧಿಯಲ್ಲಿ 730 ದಿನಗಳನ್ನು ಮೀರದಂತೆ ರಜೆಯನ್ನು ಪಡೆಯಬಹುದಾಗಿದೆ.

ನ್ಯೂನತೆಯುಳ್ಳ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ವಿವಿಧ ಕಾಯಿಲೆ ಬರುವ ಕಾರಣದಿಂದ ಅಂತಹ ಮಕ್ಕಳ ಆರೈಕೆಗಾಗಿ ತಾಯಂದಿರ ಅವಶ್ಯಕತೆ ಇದೆ. ಈ ಕಾರಣದಿಂದ ರಾಜ್ಯ ಸರ್ಕಾರ ಶಿಶುಪಾಲನಾ ರಜೆ ನೀಡಲು 2011 ರಲ್ಲಿ ಆದೇಶ ಹೊರಡಿಸಿದೆ.

ಅದೇ ರೀತಿ ಕೆ.ಪಿ.ಟಿ.ಸಿ.ಎಲ್., ಮೆಸ್ಕಾಂ, ಬೆಸ್ಕಾಂ ಮೊದಲಾದ ವಿದ್ಯುತ್ ಕಂಪನಿಗಳ ಮಹಿಳಾ ನೌಕರರಿಗೂ ಶಿಶುಪಾಲನಾ ರಜೆ ನೀಡಲು ತೀರ್ಮಾನಿಸಲಾಗಿದೆ. ದೈಹಿಕ, ಮಾನಸಿಕ ವಿಶೇಷಚೇತನ ಮಕ್ಕಳಿರುವ ಮಹಿಳಾ ಸಿಬ್ಬಂದಿ ವಾರ್ಷಿಕ 45 ದಿನ ರಜೆ ಪಡೆಯಬಹುದಾಗಿದೆ.

ಹಿಂದೆ ಕೆ.ಪಿ.ಟಿ.ಸಿ.ಎಲ್., ವಿದ್ಯುತ್ ಕಂಪನಿಗಳ ಮಹಿಳಾ ನೌಕರರ ವಿಶೇಷ ಸಾಂದರ್ಭಿಕ ರಜೆಯನ್ನು ರದ್ದುಪಡಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...