alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿಗೆ ವಿಷ ಕುಡಿಸಿ ದಂಪತಿ ಆತ್ಮಹತ್ಯೆ

A palm

ಬಳ್ಳಾರಿ: ಮಗುವಿಗೆ ವಿಷ ಕುಡಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು ಹೊರ ವಲಯದಲ್ಲಿ ನಡೆದಿದೆ.

ಮೃತ್ಯುಂಜಯ ಮತ್ತು ಅವರ ಪತ್ನಿ ಮಧು ಆತ್ಮಹತ್ಯೆ ಮಾಡಿಕೊಂಡವರು. 2 ವರ್ಷದ ಹೆಣ್ಣು ಮಗುವಿಗೂ ದಂಪತಿ ವಿಷ ಕುಡಿಸಿದ್ದಾರೆ. ದಂಪತಿಯ ಮತ್ತಿಬ್ಬರು ಮಕ್ಕಳು ಶಾಲೆಗೆ ತೆರಳಿದ್ದರು.

ಬೆಳಿಗ್ಗೆ ಜಮೀನಿಗೆ ತೆರಳಿದ್ದು ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿ ಹಾಗೂ ಮಗುವಿನ ಶವ ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಕೊಟ್ಟೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಬಳಿ ವಿಷದ ಬಾಟಲಿ, ಡೆತ್ ನೋಟ್ ಸಿಕ್ಕಿದೆ. ತಮ್ಮ ಸಾವಿಗೆ ತಾವೇ ಕಾರಣವೆಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...