alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಅನೈತಿಕ ಸಂಬಂಧದ ವಿಡಿಯೋ ತೋರಿಸಿದ

ಕೊಪ್ಪಳ: ಅಕ್ರಮ ಸಂಬಂಧ ಹೊಂದಿರುವ ಮಹಿಳೆಯೊಂದಿಗೆ ಮಲಗಿದ ದೃಶ್ಯಗಳನ್ನು ಸೆರೆ ಹಿಡಿದ ವ್ಯಕ್ತಿಯೊಬ್ಬ, ಅದನ್ನು ಪತ್ನಿಗೆ ತೋರಿಸಿ ಕಿರುಕುಳ ನೀಡಿದ್ದಾನೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ದಾಸನಾಳ ಗ್ರಾಮದ ವ್ಯಕ್ತಿಯೇ ಇಂತಹ ಕೃತ್ಯವೆಸಗಿದವ. ಪತ್ನಿಗೆ ಕಿರಕುಳ ನೀಡಿ ವಿಚ್ಛೇದನ ಕೊಡುವಂತೆ ಪೀಡಿಸುತ್ತಿದ್ದ ನೀಚ ಬೇರೆ ಮಹಿಳೆಯೊಂದಿಗೆ ಮಲಗಿದ ದೃಶ್ಯಗಳನ್ನು ಪತ್ನಿಗೆ ತೋರಿಸಿದ್ದಾನೆ.

2011 ರಲ್ಲಿ ಮದುವೆಯಾಗಿದ್ದು, ಕೆಲವು ದಿನ ಚೆನ್ನಾಗಿಯೇ ಇದ್ದ ವ್ಯಕ್ತಿ ನಂತರದಲ್ಲಿ ಪತ್ನಿ ನೋಡಲು ಸರಿ ಇಲ್ಲ ಎಂದು ಕಿರುಕುಳ ನೀಡಲಾರಂಭಿಸಿದ್ದಾನೆ. ಇತ್ತೀಚೆಗೆ ಆತನ ವರ್ತನೆ ಮಿತಿ ಮೀರಿದ್ದು, ಪತ್ನಿಯ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಪತ್ನಿಗಿಂತ ಹೆಚ್ಚಾಗಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ಕಾಲ ಕಳೆಯುತ್ತಿದ್ದ ಕಾಮುಕ, ಪತ್ನಿಗೆ ಕಿರುಕುಳ ನೀಡಿದ್ದಾನೆ. ಪತಿಯ ಈ ವಿಚಿತ್ರ ವರ್ತನೆಯಿಂದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...