alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಅರ್ಚಕನ ಅಶ್ಲೀಲ ಚಿತ್ರ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿಯ ಕಿಷ್ಕಿಂದ ಅಂಜನಾದ್ರಿ ಬೆಟ್ಟದ ಮುಖ್ಯ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಅವರ ಅಶ್ಲೀಲ ಚಿತ್ರ ವೈರಲ್ ಆಗಿದೆ. ಅಲ್ಲದೇ ಯುವತಿಯೊಂದಿಗೆ ಅವರು ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ಕೂಡ ಹರಿದಾಡ್ತಿದೆ.

ದೇವಾಲಯದ ನಿರ್ವಹಣೆಗೆ ಸ್ಥಳೀಯ ರಾಜವಂಶಸ್ಥರು ಮತ್ತು ಸಾರ್ವಜನಿಕರನ್ನು ಒಳಗೊಂಡಿರುವ ದೇವಾಲಯದ ಕಮಿಟಿ ರಚಿಸಲಾಗಿದ್ದು, 2010 ರಲ್ಲಿ ಮಹಾಂತ ವಿದ್ಯಾದಾಸ ಬಾಬಾ ಅವರನ್ನು ಮುಖ್ಯ ಅರ್ಚಕರಾಗಿ ನೇಮಿಸಲಾಗಿದೆ. ಕಮಿಟಿಯ ಬಗ್ಗೆ ತಲೆಕೆಡಿಸಿಕೊಳ್ಳದೇ ಬಾಬಾ ಮಹಿಳೆಯರನ್ನು ದೇವಾಲಯದ ಕೆಲಸಗಳಿಗೆ ನೇಮಿಸಿಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ಇಂತಹ ಆರೋಪಗಳನ್ನೆಲ್ಲಾ ಅಲ್ಲಗಳೆದಿರುವ ಬಾಬಾ, ತಮಗೆ ಆಗದವರು ಇಂತಹ ಕೆಲಸ ಮಾಡಿದ್ದಾರೆ. ಕೆಲವರು ದೇವಾಲಯ ಬಿಟ್ಟು ಹೋಗುವಂತೆ ಬೆದರಿಸಿದ್ದರು. ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಾನು ನಿರಾಕರಿಸಿದಾಗ, ತಮ್ಮ ಬೆತ್ತಲೆ ಫೋಟೋ ಮತ್ತು ಆಡಿಯೋ ಸೃಷ್ಠಿಸಿ ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಇಂತಹ ಕೆಲಸ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ತಿಳಿಸಿದ್ದಾರೆ. ಬಾಬಾ ಅವರ ಅಶ್ಲೀಲ ವಿಚಾರ ವೈರಲ್ ಆಗುತ್ತಿದ್ದಂತೆ ದೇವಾಲಯ ಟ್ರಸ್ಟ್, ಅವರ ಸ್ಥಾನಕ್ಕೆ ಬೇರೆಯವರನ್ನು ನಿಯೋಜಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...