alex Certify
ಕನ್ನಡ ದುನಿಯಾ       Mobile App
       

Kannada Duniya

ಗುಟ್ಟಾಗಿ ಮದುವೆಯಾದ ಗಂಡ: ಪತ್ನಿಯರ ಜಗಳ

ಕೊಪ್ಪಳ: ಪತ್ನಿ ಇದ್ದರೂ ಎದುರು ಮನೆಯ ಯುವತಿಯನ್ನು ವ್ಯಕ್ತಿಯೊಬ್ಬ ಮದುವೆಯಾಗಿದ್ದು, ಆತನಿಗಾಗಿ ಇಬ್ಬರೂ ಪತ್ನಿಯರು ಹೊಡೆದಾಡಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಮಂಜುನಾಥ, ತನ್ನ ಸಂಬಂಧಿಕರಾದ ಕೊಪ್ಪಳ ಬೆಂಕಿನಗರದ ಯುವತಿಯನ್ನು 2013 ರಲ್ಲಿ ಮದುವೆಯಾಗಿದ್ದಾನೆ.

ಪತ್ನಿಯ ಮನೆಗೆ ಬಂದು ಹೋಗುತ್ತಿದ್ದ ಮಂಜುನಾಥ, ಆಕೆಯ ಎದುರು ಮನೆಯ ಯುವತಿಯನ್ನು ಪ್ರೀತಿಸುವ ನಾಟಕವಾಡಿ ಗರ್ಭಿಣಿ ಮಾಡಿದ್ದಲ್ಲದೇ ಕಳೆದ ವರ್ಷ ಮದುವೆಯಾಗಿದ್ದಾನೆ.

ಮಂಜುನಾಥ 2 ನೇ ಪತ್ನಿ ಮನೆಯಲ್ಲಿರುವುದನ್ನು ತಿಳಿದ ಮೊದಲ ಪತ್ನಿ, ತನ್ನ ತಾಯಿಯೊಂದಿಗೆ ಬಂದು ಧರಣಿ ಕುಳಿತಿದ್ದಾಳೆ. ಇದರಿಂದಾಗಿ ಮೊದಲ ಹಾಗೂ 2 ನೇ ಪತ್ನಿ ನಡುವೆ ಜಗಳವಾಗಿ ಹೊಡೆದಾಡಿಕೊಂಡಿದ್ದಾರೆ.

ನನಗೆ ನನ್ನ ಗಂಡ ಬೇಕೆಂದು ಮೊದಲ ಪತ್ನಿ ಹೇಳಿದರೆ, ನಾನು ಮದುವೆಯಾಗಿದ್ದೇನೆ ಎಂದು 2 ನೇ ಪತ್ನಿ ತಿಳಿಸಿದ್ದಾರೆ. ಮಂಜುನಾಥ ನಾನು ಮೊದಲ ಪತ್ನಿಯನ್ನು ಮನೆಯಿಂದ ಹೊರಹಾಕಿಲ್ಲ. ಇಬ್ಬರೂ ಮನೆಯಲ್ಲಿರಲಿ. ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...