alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆಯಲ್ಲಿ ಅತ್ತಿಗೆ ಸೋಲು: ಹತಾಶೆಗೊಂಡ ಮೈದುನನಿಂದ ಮಹಿಳೆಗೆ ಚಾಕು ಇರಿತ

ಕೊಪ್ಪಳ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ಅತ್ತಿಗೆ ಸೋತ ಹಿನ್ನಲೆಯಲ್ಲಿ ಬೇಸರಗೊಂಡ ಮೈದುನ ಮಹಿಳೆಯೊಬ್ಬರಿಗೆ ಚಾಕು ಇರಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಸಯ್ಯದ್ ನಿಜಾಮುದ್ದೀನ್ ಹುಸೇನಿ ಎಂಬ ಕಾಂಗ್ರೆಸ್ ಕಾರ್ಯಕರ್ತ. ರೆಹಮತ್ ಬಿ ಎಂಬಾಕೆಗೆ ಚಾಕು ಇರಿದಿದ್ದಾನೆ. 19 ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೈಯ್ಯದ್ ನಿಜಾಮುದ್ದೀನ್​ನ ಅತ್ತಿಗೆ ಸಯ್ಯದ್ ಸಾಜಿಯಾ ಬೇಗಂ ಸ್ಪರ್ಧೆ ಮಾಡಿದ್ದರು. ಜೆಡಿಎಸ್​​ನಿಂದ ಸ್ಪರ್ಧಿಸಿದ್ದ ಆಯೇಷಾ ರುಬೀನಾ ಎಂಬುವವರು ಈ ವಾರ್ಡಿನಲ್ಲಿ ಜಯ ಸಾಧಿಸಿದ್ದಾರೆ.

ರೆಹಮತ್ ಬಿ ಅವರ ಮಕ್ಕಳು ಜೆಡಿಎಸ್ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಬೆಂಬಲಿಸಿದ್ದರು. ಇದರಿಂದಾಗಿ ತನ್ನ ಅತ್ತಿಗೆಗೆ ಸೋಲಾಗಿದೆ ಎಂದು ಕೋಪಗೊಂಡ ಸೈಯ್ಯದ್ ನಿಜಾಮುದ್ದೀನ್, ರೆಹಮತ್ ಬಿ ಅವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಸಧ್ಯ ಸೈಯ್ಯದ್ ನಿಜಾಮುದ್ದೀನ್ ನನ್ನು ಬಂಧಿಸಿರುವ ಕೊಪ್ಪಳ ನಗರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...