alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲಾ ಮುಗಿದ ಮೇಲೆ ಮಹಿಳೆಗೆ ಕೈಕೊಟ್ಟ

kopal-d

ಕೊಪ್ಪಳ: ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ಪತ್ನಿಯ ರೀತಿಯಲ್ಲಿ ಬಳಸಿಕೊಂಡ ದುರುಳನೊಬ್ಬ ಮೋಸ ಮಾಡಿದ್ದಾನೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕನಕಗಿರಿಯ ಪ್ರಭಾವಿ ಮುಖಂಡನೊಬ್ಬನ ಸಹೋದರ ಹೀಗೆ ಮಹಿಳೆಗೆ ಮೋಸ ಮಾಡಿದವ.

ಗಂಡನಿಂದ ದೂರವಾಗಿ, ಇಬ್ಬರು ಮಕ್ಕಳನ್ನು ಹೊಂದಿರುವ ಮಹಿಳೆಯೊಂದಿಗೆ 6 ವರ್ಷದಿಂದ ಸಂಬಂಧ ಹೊಂದಿದ್ದ ದುರುಳ, ಆಕೆಗೆ ಮನೆ ಮಾಡಿಕೊಟ್ಟು ಪತ್ನಿಯ ರೀತಿಯಲ್ಲಿ ಸಂಸಾರ ಮಾಡಿದ್ದಾನೆ.

ಆಕೆಯ ಬಳಿ ಇದ್ದ ಹಣ ಸೇರಿದಂತೆ ಎಲ್ಲವನ್ನು ಪಡೆದುಕೊಂಡಿದ್ದಾನೆ. ಈಗಾಗಲೇ ಮದುವೆಯಾಗಿರುವ ಕಾಮುಕ, ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ಆಕೆಗೆ ಕೈಕೊಟ್ಟಿದ್ದು, ಆತನ ಸಹೋದರನಾಗಿರುವ ರಾಜಕೀಯ ಮುಖಂಡನಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ.

ನೊಂದ ಮಹಿಳೆ ಕನಕಗಿರಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರೂ ಸ್ಪಂದಿಸಿಲ್ಲ. ಕೊನೆಗೆ ಆಕೆ ಎಸ್.ಪಿ.ಗೆ ದೂರು ನೀಡಲು ಮುಂದಾಗಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...