alex Certify
ಕನ್ನಡ ದುನಿಯಾ       Mobile App
       

Kannada Duniya

ಭಸ್ಮವಾಯ್ತು ಲಕ್ಷಾಂತರ ರೂ. ಮೌಲ್ಯದ ಮೇವು

mevu-fire

ಕೊಪ್ಪಳ: ವಿದ್ಯುತ್ ತಂತಿ ತಗುಲಿ 1 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಮೇವು ಸುಟ್ಟು ಭಸ್ಮವಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕಾರೇಡಗ್ಗಿಯಲ್ಲಿ ನಡೆದಿದೆ.

ತಡರಾತ್ರಿ ಗ್ರಾಮದ ಹೊರವಲಯದಲ್ಲಿ ರೈತರಿಬ್ಬರಿಗೆ ಸೇರಿದ ಬಣವೆಗೆ ಬೆಂಕಿ ತಗುಲಿದೆ. ಸಮೀಪದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಇಡೀ ಬಣವೆಗೆ ವ್ಯಾಪಿಸಿದೆ.

ಗ್ರಾಮಸ್ಥರು ಜೊತೆಗೂಡಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಸಫಲವಾಗಿಲ್ಲ. ಕೊನೆಗೆ 4 ಅಗ್ನಿಶಾಮಕ ವಾಹನದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಸರಿಯಾದ ಸಮಯಕ್ಕೆ ಅಗ್ನಿಶಾಮಕ ವಾಹನಗಳು ಆಗಮಿಸಿದ ಕಾರಣ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗಂಗಾವತಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲಕ್ಷಾಂತರ ರೂ. ಮೌಲ್ಯದ ಮೇವು ಸುಟ್ಟುಹೋಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...