alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬದ ಆಚರಣೆ ವೇಳೆಯೇ ಅವಘಡ

ಕೊಪ್ಪಳ: ಬೆಂಕಿ ಕೊಂಡಕ್ಕೆ ಬಿದ್ದು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಿಬೆಣಕಲ್ ಗ್ರಾಮದಲ್ಲಿ ನಡೆದಿದೆ.

ಮೊಹರಂ ನಿಮಿತ್ತ ಕೌಡೇ ಪೀರ ದೇವರ ಕೆಂಡಾರ್ಚನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಟ್ಟಿಗೆ ಸಂಪೂರ್ಣ ಸುಟ್ಟ ಮೇಲೆ ಕೆಂಡದ ಮೇಲೆ ನಡೆಯಬೇಕಿತ್ತು.

ಆದರೆ, ಬೆಂಕಿ ಹೊತ್ತಿ ಉರಿಯುವಾಗಲೇ ಖಾದರ್ ಭಾಷಾ ಎಂಬಾತ ಆಯತಪ್ಪಿ ಬಿದ್ದಿದ್ದಾನೆ. ಬೆಂಕಿ ಆತನ ಮೈಗೆ ತಾಗಿ ಸುಟ್ಟಿದ್ದು, ಬೆಂಕಿಯಲ್ಲಿ ಒದ್ದಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಆತನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಶೇ. 50 ರಷ್ಟು ಸುಟ್ಟ ಗಾಯಗಳಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...