alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಸ್ಮಿಕ ಬೆಂಕಿಗೆ 16 ಗೂಡಂಗಡಿಗಳು ಭಸ್ಮ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕಾರಟಗಿಯಲ್ಲಿ ಆಕಸ್ಮಿಕ ಬೆಂಕಿಗೆ 16 ಗೂಡಂಗಡಿಗಳು ಸುಟ್ಟು ಹೋಗಿವೆ.

ಗ್ಯಾರೇಜ್, ಸಲೂನ್, ವರ್ಕ್ ಶಾಪ್, ಹೋಟೆಲ್ ಸೇರಿ ಹಲವಾರು ಗೂಡಂಗಡಿಗಳು ಇಲ್ಲಿದ್ದು, ಬೆಂಕಿಯಿಂದ ಹೋಟೆಲ್ ನಲ್ಲಿದ್ದ ಸಿಲಿಂಡರ್ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಾರಟಗಿ ಮುಖ್ಯ ರಸ್ತೆಯಲ್ಲಿ ಗೂಡಂಗಡಿಗಳು ಇದ್ದು, ಒಂದು ಅಂಗಡಿಗೆ ತಗುಲಿದ ಬೆಂಕಿ ನಿಯಂತ್ರಣಕ್ಕೆ ಸಿಗದೇ ಎಲ್ಲಾ ಅಂಗಡಿಗಳಿಗೆ ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಬೆಂಕಿ ಅವಘಡದಿಂದಾಗಿ ಭಾರೀ ನಷ್ಟವಾಗಿದೆ. ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...