alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿಥಿ ಉಪನ್ಯಾಸಕನ ಮನೆಯಲ್ಲಿ ನಕಲಿ ನೋಟ್..?

fake-nottt

ಕೊಪ್ಪಳ: ಅತಿಥಿ ಉಪನ್ಯಾಸಕರೊಬ್ಬರ ಮನೆ ಮೇಲೆ ದಾಳಿ ಮಾಡಿರುವ ಪೊಲೀಸರು, ಹೊಸ ಕಲರ್ ಪ್ರಿಂಟರ್, 2000 ರೂ. ಮುಖಬೆಲೆಯ 1 ಲಕ್ಷ ರೂ. ನಕಲಿ ನೋಟ್ ವಶಕ್ಕೆ ಪಡೆದಿದ್ದಾರೆ.

ಗವಿಸಿದ್ದೇಶ್ವರ ಕಾಲೇಜ್ ನಲ್ಲಿ ಅತಿಥಿ ಉಪನ್ಯಾಸಕರಾಗಿರುವ ಶಿವಕುಮಾರ್ ಮನೆಯಲ್ಲಿ ನಕಲಿ ನೋಟ್ ಕಂಡು ಬಂದಿವೆ.

ಮನೆಯಲ್ಲಿ ಶಿವಕುಮಾರ್ ಇಲ್ಲದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ನಿಮ್ಮ ಮನೆಯಲ್ಲಿ ತನಿಖೆ ಮಾಡಬೇಕಿದೆ ಎಂದು ಶಿವಕುಮಾರ್ ಅವರನ್ನು ಕರೆಸಿಕೊಂಡಿದ್ದಾರೆ.

ಚೀಲವೊಂದನ್ನು ತಪಾಸಣೆ ಮಾಡಿದಾಗ, ಅದರಲ್ಲಿ ಹೊಸ ಪ್ರಿಂಟರ್ ಹಾಗೂ ನಕಲಿ ನೋಟ್ ಪತ್ತೆಯಾಗಿವೆ ಎನ್ನಲಾಗಿದೆ.

ಪೊಲೀಸರು ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಶಿವಕುಮಾರ್ ನಕಲಿ ನೋಟ್ ದಂಧೆಯಲ್ಲಿ ಭಾಗಿಯಾಗಿಲ್ಲ. ಇದರ ಹಿಂದೆ ಷಡ್ಯಂತ್ರವಿದೆ ಎಂದು ಸಾರ್ವಜನಿಕರು ಹೇಳಿದ್ದು, ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.

ಶಿವಕುಮಾರ್ ತಾವು ಯಾವುದೇ ನಕಲಿ ನೋಟ್ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿ ಪ್ರತಿಭಟನಾಕಾರರನ್ನು ಮನೆಗೆ ಕಳುಹಿಸಿದ್ದಾರೆ.

ನಕಲಿ ನೋಟ್ ಪ್ರಿಂಟ್ ಮಾಡಿದ್ದರೆ, ಹೊಸ ಪ್ರಿಂಟರ್ ಬಳಕೆಯಾಗಿಲ್ಲವೇಕೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...