alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಕದ ಮನೆ ಮಹಿಳೆಯಿಂದ ಹೇಯಕೃತ್ಯ…?

ಕೊಪ್ಪಳ: ಒಡವೆ ದೋಚುವ ಉದ್ದೇಶದಿಂದ ಒಂದೂವರೆ ವರ್ಷದ ಮಗುವನ್ನು ಕದ್ದೊಯ್ದು, ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕುಕುನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯಡಿಯಾಪುರದ ಅಂಬವ್ವ ಎಂಬ ಮಹಿಳೆ ಇಂತಹ ಕೃತ್ಯವೆಸಗಿದ ಆರೋಪ ಕೇಳಿ ಬಂದಿದೆ. ಪಕ್ಕದ ಮನೆಯ ಪ್ರತಿಭಾ ಎನ್ನುವ ಮಗುವಿನ ಮೇಲೆ ಚಿನ್ನ, ಬೆಳ್ಳಿಯ ಸರಗಳನ್ನು ಪೋಷಕರು ಹಾಕಿದ್ದು, ಇದನ್ನು ಗಮನಿಸಿದ ಅಂಬವ್ವ, ಮನೆ ಬಳಿ ಆಟವಾಡುತ್ತಿದ್ದ ಮಗುವನ್ನು ಅಪಹರಿಸಿದ್ದಾಳೆ. ಮಗುವಿನ ಮೈಮೇಲಿದ್ದ ಆಭರಣ ತೆಗೆದುಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಕುಕನೂರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿತ ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...