alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಠಾಣೆಯಲ್ಲೇ ಪ್ರೊಬೆಷನರಿ PSI ಮಾಡಿದ ಕೃತ್ಯ

ಕೊಪ್ಪಳ: ಸಿಗ್ನಲ್ ಜಂಪ್ ಮಾಡಿದ ಕಾರಣಕ್ಕೆ ಇಬ್ಬರು ಯುವಕರನ್ನು ಠಾಣೆಗೆ ಕರೆತಂದು ಬೆಲ್ಟ್ ನಲ್ಲಿ ಅಮಾನವೀಯವಾಗಿ ಥಳಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಪ್ರಸಿದ್ಧ ಗವಿಮಠದ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದ ಹಿನ್ನಲೆಯಲ್ಲಿ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ಜಾತ್ರೆಗೆ ಬಂದಿದ್ದ ಬಸವಾಪುರ ಗ್ರಾಮದ ಇಬ್ಬರು ಯುವಕರು ಬೈಕ್ ನಲ್ಲಿ ಹೋಗುವಾಗ, ಬಸವೇಶ್ವರ ವೃತ್ತದಲ್ಲಿ ಸಿಗ್ನಲ್ ಜಂಪ್ ಮಾಡಿದ್ದಾರೆ. ಅವರಿಬ್ಬರನ್ನು ಠಾಣೆಗೆ ಕರೆ ತಂದ ಪ್ರೊಬೆಷನರಿ ಪಿ.ಎಸ್.ಐ. ಬೆಲ್ಟ್ ನಿಂದ ಅಮಾನವೀಯವಾಗಿ ಥಳಿಸಿದ್ದಾರೆ.

ಎಷ್ಟು ಬೇಡಿಕೊಂಡರೂ ಕೇಳದೇ ಬೆಲ್ಟ್ ನಿಂದ ಥಳಿಸಿದ್ದು, ಅದನ್ನು ಕಂಡ ಇತರೆ ಪೊಲೀಸರು ನಗಾಡಿದ್ದಾರೆ. ಈ ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಪಿ.ಎಸ್.ಐ. ದರ್ಪದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಪ್ಪು ಮಾಡಿದ ಸಂದರ್ಭದಲ್ಲಿ ಕೇಸ್ ಹಾಕಿ ದಂಡ ವಿಧಿಸಲಿ. ಆದರೆ, ಸಿಗ್ನಲ್ ಜಂಪ್ ಮಾಡಿದ ಕಾರಣಕ್ಕೆ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದು ಸರಿಯಲ್ಲ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...