alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೇ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಉದ್ಯೋಗಾವಕಾಶ

ಕೊಂಕಣ ರೈಲ್ವೆಯ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡವರಿಗಾಗಿ ಗ್ರೂಪ್‌ ಡಿ ಹುದ್ದೆಗೆ ನಿಗಮ ನೇಮಕಾತಿ ನಡೆಸಲಿದೆ. ಇದಕ್ಕೆ ಏರ್ಪಡಿಸಲಾಗುವ ಪರೀಕ್ಷೆಯನ್ನು ಕನ್ನಡ, ಕೊಂಕಣಿ ಸೇರಿ 3 ಭಾಷೆಗಳಲ್ಲಿ ಬರೆಯಲು ಅನುಮತಿ ಸಿಕ್ಕಿದೆ.

ಈ ಹಿಂದಿನ ಅಧಿಸೂಚನೆಯಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿತ್ತು. ಇದೀಗ ಕನ್ನಡ, ಮರಾಠಿ ಹಾಗೂ ಕೊಂಕಣಿ ಭಾಷೆಗಳಲ್ಲೂ ಪರೀಕ್ಷೆ ಬರೆಯಬಹುದು ಎಂದು ಹೊಸ ಅಧಿಸೂಚನೆ ಹೊರಡಿಸಿದೆ.

ಟ್ರಾಕ್‌ ಮ್ಯಾನ್‌, ಅಸಿಸ್ಟೆಂಟ್‌ ಪಾಯಿಂಟ್ಸ್‌ ಮ್ಯಾನ್‌ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಕೊಂಕಣ ರೈಲ್ವೆ ಯೋಜನೆಗಳಿಗೆ ಭೂಮಿ ನೀಡಿದಂತಹವರು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟಾರೆ 100 ಹುದ್ದೆಗಳು ಖಾಲಿ ಇದ್ದು, ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗೆ ಅರ್ಜಿ ಸಲ್ಲಿಸಿದವರು ಮತ್ತೆ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದೆ.

ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ವಯಸ್ಸು 18ರಿಂದ 33ರ ಒಳಗೆ ಇರಬೇಕು. ರೋಹಾ(ಮಹಾರಾಷ್ಟ್ರ)ದಿಂದ ತೋಕುರ್‌(ಕರ್ನಾಟಕ) ನಡುವಿನ ರೈಲು ಮಾರ್ಗಕ್ಕಾಗಿ ನಿಗಮಕ್ಕೆ ಭೂಮಿ ನೀಡಿರಬೇಕು. ಮಾಲೀಕನ ಪತ್ನಿ, ಮಗ, ಮದುವೆಯಾಗದ ಮಗಳು ಅರ್ಜಿ ಸಲ್ಲಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...