alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಳ್ಳೇಗಾಲದಲ್ಲಿ ಮಹೇಶ್ ಗೆಲುವು : ಕರ್ನಾಟಕದಲ್ಲಿ ಖಾತೆ ತೆರೆದ ಬಿಎಸ್ಪಿ

ಕರ್ನಾಟಕದಲ್ಲಿ ಬಿಎಸ್ಪಿ ಖಾತೆ ತೆರೆದಿದೆ. ಅನೇಕ ವರ್ಷಗಳ ನಂತ್ರ ರಾಜ್ಯದಲ್ಲಿ ಬಿಎಸ್ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿ ಮಹೇಶ್ ಗೆಲುವು ಸಾಧಿಸಿದ್ದಾರೆ. ಕೊಳ್ಳೇಗಾಲದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್ಪಿ ನಡುವೆ ಫೈಟ್ ಇತ್ತು.

ಚಾಮರಾಜನಗರ ಜಿಲ್ಲೆ ಪ್ರಮುಖ ತಾಲೂಕುಗಳಲ್ಲಿ ಕೊಳ್ಳೇಗಾಲ ಒಂದು. ರೇಷ್ಮೇ ನಗರಿ ಎಂದೇ ಹೆಸರು ಪಡೆದಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಇಲ್ಲಿ ಯಾವುದೇ ಪಕ್ಷ ನಿರಂತರ  ಪ್ರಾಬಲ್ಯ ಮೆರೆದಿಲ್ಲ. 1985ರಲ್ಲಿ ಜನತಾ ಪಕ್ಷ, ನಂತ್ರ ಕಾಂಗ್ರೆಸ್ ಆ ನಂತ್ರ ಜನತಾದಳ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.

2008 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ರೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದ್ರೆ 2013ರಲ್ಲಿ ಮತ್ತೆ ಕೈ ಬಲ ಹೆಚ್ಚಾಗಿತ್ತು. ಉಭಯ ಪಕ್ಷಗಳ ಮೈತ್ರಿಯಿಂದ ಇಲ್ಲಿ ಈ ಬಾರಿ ಬಿಎಸ್ಪಿ ಬಲ ಹೆಚ್ಚಾಗಿತ್ತು. ಬಿಜೆಪಿಯಿಂದ ಜಿ.ಎನ್.ನಂಜುಂಡ ಸ್ವಾಮಿ ಹಾಗೂ ಕಾಂಗ್ರೆಸ್ ನಿಂದ ಎ.ಆರ್.ಕೃಷ್ಣಮೂರ್ತಿ ಸ್ಪರ್ಧಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...