alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕ್ಕಾಗಿ ನಡೆದಿದೆ ಅಮಾನವೀಯ ಕೃತ್ಯ

house arrest 3344ಕೋಲಾರದ ರಹಮತ್ ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಸಯ್ಯದ್ ಅನ್ಸರ್ ಎಂಬ ವ್ಯಕ್ತಿ ಚೀಟಿ ವ್ಯವಹಾರ ನಡೆಸುತ್ತಿದ್ದು, ಚೀಟಿ ಹಣ ಸರಿಯಾಗಿ ಪಾವತಿಯಾಗದ ಕಾರಣ ಇಶ್ರತ್ ಎಂಬವಳಿಗೆ ನೀಡಬೇಕಿದ್ದ 2 ಲಕ್ಷ ರೂ. ಗಳಿಗೂ ಅಧಿಕ ಹಣವನ್ನು ಕೊಡಲು ಸಾಧ್ಯವಾಗದೆ ಪರಾರಿಯಾಗಿದ್ದ.

ಇದರಿಂದ ಕೋಪಗೊಂಡ ಇಶ್ರತ್, ಸಯ್ಯದ್ ಅನ್ಸರ್ ನ ಪತ್ನಿಯನ್ನು ತನ್ನ ಮನೆ ಕೆಲಸಕ್ಕಿಟ್ಟುಕೊಂಡು ಕಳೆದ 26 ದಿನಗಳಿಂದ ದಿಗ್ಭಂಧನಕ್ಕೊಳಪಡಿಸಿದ್ದಾಳೆನ್ನಲಾಗಿದೆ. ಊಟ, ನೀರು ಸರಿಯಾಗಿ ಕೊಡದೆ ಕೂಡಿ ಹಾಕಿ ಕಿರುಕುಳ ನೀಡಿದ್ದಾಳೆ.

ತಮ್ಮ ತಾಯಿಯನ್ನು ನೋಡಲು ಹೋದ ಮಗ ಹಾಗೂ ಮಗಳನ್ನೂ ಕೂಡಿ ಹಾಕಿ ಫೋನ್ ಕಸಿದುಕೊಂಡು ಹಣ ವಾಪಸ್ ಕೊಡದಿದ್ದರೆ ನಿಮ್ಮನ್ನು ಬಿಡುವುದಿಲ್ಲವೆಂದು ಕಿರುಕುಳ ನೀಡಿದ್ದಾಳೆ.

ಅನ್ಸರ್ ಪತ್ನಿ ತೀವ್ರ ಅಸ್ವಸ್ಥಗೊಂಡ ಕಾರಣ ಅಕ್ಕಪಕ್ಕದವರ ಸಹಾಯದಿಂದ ಹೊರ ಬಂದಿದ್ದಾರೆ. ಈಗ ಆಕೆ ನೀಡಿದ ದೂರಿನನ್ವಯ ಗಲ್ ಪೇಟೆ ಪೊಲೀಸರು ಇಶ್ರತ್ ಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...