alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ಪ್ರದರ್ಶನದ ವೇಳೆಯೇ ಫಾಗಿಂಗ್

kolr-fog

ಕೋಲಾರ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸಲಾಗಿದೆ. ಕೋಲಾರದಲ್ಲಿ ಯೋಗ ಪ್ರದರ್ಶನದ ವೇಳೆ ಫಾಗಿಂಗ್ ಮಾಡಿದ ಘಟನೆ ನಡೆದಿದೆ.

ಇಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗಪಟುಗಳು ಪ್ರದರ್ಶನ ನೀಡುವಾಗ ಸೊಳ್ಳೆಕಾಟ ಕಂಡು ಬಂದಿದೆ.

ನಗರಸಭೆಯಿಂದ ಫಾಗಿಂಗ್ ಯಂತ್ರಗಳನ್ನು ತರಿಸಿ ಯೋಗ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಫಾಗಿಂಗ್ ಮಾಡಿದ್ದು, ಇದರಿಂದಾಗಿ ದಟ್ಟವಾದ ಹೊಗೆ ಆವರಿಸಿ ಯೋಗಪಟುಗಳು ಮೂಗು ಮುಚ್ಚಿಕೊಂಡು ಕುಳಿತುಕೊಳ್ಳುವಂತಾಗಿತ್ತು.

ಕೆಲಕಾಲ ಯೋಗಪಟುಗಳು ತೊಂದರೆ ಅನುಭವಿಸಿದ್ದು, ಬಳಿಕ ಫಾಗಿಂಗ್ ಯಂತ್ರಗಳನ್ನು ಹೊರಗೆ ಕೊಂಡೊಯ್ಯಲಾಗಿದ್ದು, ಯೋಗ ಪ್ರದರ್ಶನ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...