alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ತಿರುವು ಪಡೆದ ವಧು ನಾಪತ್ತೆ ಪ್ರಕರಣ, ವರನೂ ಪರಾರಿ

ಕೋಲಾರ: ಕೋಲಾರ ಜಿಲ್ಲೆಯ ಮಾಲೂರಿನ ಮದುವೆ ಮಂಟಪದಲ್ಲಿ ವಧು ನಾಪತ್ತೆಯಾಗಿದ್ದ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ವರನೂ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ.

ಮೊದಲಿಗೆ ವಧು ನಾಪತ್ತೆಯಾಗಿದ್ದ ಕಾರಣ, ಮಾಲೂರಿನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸುವ ಬದಲು, ವಧುವಿನ ಚಿಕ್ಕಪ್ಪನ ಮಗಳೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ವರ ಕೂಡ ಪರಾರಿಯಾಗಿದ್ದಾನೆ.

ವಧು ನಾಪತ್ತೆಯಾಗಿದ್ದರಿಂದ ಹಿರಿಯರೆಲ್ಲಾ ಸೇರಿ ಪಂಚಾಯಿತಿ ನಡೆಸಿ, ವಧುವಿನ ಚಿಕ್ಕಪ್ಪನ ಮಗಳೊಂದಿಗೆ ಮದುವೆ ಮಾಡಲು ತೀರ್ಮಾನಿಸಿದ್ದರು. ನಿಗದಿಯಾಗಿದ್ದ ಮುಹೂರ್ತದಲ್ಲಿಯೇ ಬದಲಾದ ಯುವತಿಯೊಂದಿಗೆ ಮದುವೆ ಮಾಡಲು ಎಲ್ಲರೂ ತೀರ್ಮಾನಿಸಿದ್ದು, ಅದರಂತೆ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಹೂರ್ತದ ವೇಳೆಗೆ ವರನೂ ನಾಪತ್ತೆಯಾಗಿದ್ದಾನೆ. ಇದರಿಂದಾಗಿ ಮದುವೆಗೆ ಬಂದವರು, ಬಂಧು ಬಾಂಧವರೆಲ್ಲಾ ಕಂಗಾಲಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...