alex Certify
ಕನ್ನಡ ದುನಿಯಾ       Mobile App
       

Kannada Duniya

ಹೀನ ಕೃತ್ಯವೆಸಗಿದ ಮಹಿಳೆ ಅರೆಸ್ಟ್

ಕೋಲಾರ: ಪತಿಯಿಂದ ದೂರವಾಗಿದ್ದ ಮಹಿಳೆಯೊಬ್ಬಳು 17 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆಯನ್ನು ಬಂಧಿಸಲಾಗಿದೆ.

24 ವರ್ಷದ ಮಹಿಳೆ ಬಂಧಿತ ಆರೋಪಿ. ಚಾಂಪಿಯನ್ಸ್ ರೀಫ್ಸ್ ನಿವಾಸಿಯಾಗಿರುವ ಮಹಿಳೆ ಪತಿಯಿಂದ ದೂರವಾಗಿ ಲಾರಿ ಚಾಲಕನೊಂದಿಗೆ ವಾಸವಾಗಿದ್ದಾಳೆ. ಚಾಲಕನ ಬಳಿ ಸಹಾಯಕನಾಗಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ.

ಸೆಪ್ಟಂಬರ್ ನಲ್ಲಿ ಬಾಲಕನನ್ನು ಅಪಹರಿಸಿ ತಮಿಳುನಾಡಿನ ವೇಲಾಂಗಣಿಯಲ್ಲಿ ಒತ್ತೆ ಇಟ್ಟುಕೊಂಡಿದ್ದ ಮಹಿಳೆ ಲೈಂಗಿಕವಾಗಿ ಬಾಲಕನನ್ನು ಬಳಸಿಕೊಂಡಿದ್ದಾಳೆ.

ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಅಂಡರ್ಸನ್ ಪೇಟೆ ಪೊಲೀಸರು ವೇಲಾಂಗಣಿಯಲ್ಲಿ ಮಹಿಳೆಯನ್ನು ಬಂಧಿಸಿದ್ದಾರೆ. ಪೊಕ್ಸೊ ಹಾಗೂ ಅಪಹರಣ ಪ್ರಕರಣದಡಿ ಮಹಿಳೆಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...