alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮಗಾರಿ ವೇಳೆಯೇ ನಡೆಯಿತು ದುರಂತ

ಕೋಲಾರ: ವಿದ್ಯುತ್ ಕಂಬದ ಮೇಲಿಂದ ಬಿದ್ದು ಇಬ್ಬರು ಕಾರ್ಮಿಕರು ಸಾವು ಕಂಡ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಯಳಗೊಂಡಹಳ್ಳಿಯಲ್ಲಿ ನಡೆದಿದೆ.

ಸುರೇಶ್(27), ಗೋವಿಂದರಾಜ್(30) ಮೃತಪಟ್ಟ ಕಾರ್ಮಿಕರೆಂದು ಗುರುತಿಸಲಾಗಿದೆ. ಮತ್ತೊಬ್ಬ ಕಾರ್ಮಿಕ ಪಾಂಡ್ಯ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಕಾರ್ಮಿಕರು ತಮಿಳುನಾಡು ಮೂಲದವರಾಗಿದ್ದು, ಖಾಸಗಿ ಸೋಲಾರ್ ವಿದ್ಯುತ್ ಘಟಕದ ಕಾಮಗಾರಿ ಕೆಲಸಕ್ಕೆ ಆಗಮಿಸಿದ್ದರು. ಕಂಬದ ಮೇಲೆ ಕೆಲಸ ಮಾಡುವಾಗ ಸುರೇಶ್, ಗೋವಿಂದರಾಜ್ ಹಾಗೂ ಪಾಂಡ್ಯ ಕೆಳಗೆ ಬಿದ್ದಿದ್ದಾರೆ.

ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...