alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಮ್ಮೆ ಮಾನವೀಯತೆ ಮರೆತ ಜನ

ಕೋಲಾರ: ಅಪಘಾತದಲ್ಲಿ ಗಾಯಗೊಂಡವರನ್ನು ಮೊದಲು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವಂತೆ ಎಷ್ಟೆಲ್ಲಾ ಜಾಗೃತಿ ಮೂಡಿಸುತ್ತಿದ್ದರೂ, ಜನ ತಲೆ ಕೆಡಿಸಿಕೊಳ್ಳದೇ ಮಾನವೀಯತೆ ಮರೆತವರಂತೆ ವರ್ತಿಸುತ್ತಾರೆ.

ಅಂತಹುದೇ ಮತ್ತೊಂದು ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬೆಂಗಾನೂರು ಕ್ರಾಸ್ ಬಳಿ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಗೆ ಅತಿವೇಗವಾಗಿ ಬಂದ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕ ಕಾರ್ ಸಮೇತ ಚಾಲಕ ಪರಾರಿಯಾಗಿದ್ದಾನೆ.

ಬೈಕ್ ನಲ್ಲಿದ್ದ ಜಾರ್ಜ್ ಎಂಬ ಯುವಕ ಸ್ಥಳದಲ್ಲೇ ಸಾವು ಕಂಡಿದ್ದು, ಮತ್ತೊಬ್ಬ ಯುವಕ ಶ್ರೀಕಾಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೀಕಾಂತ್ ಸುಮಾರು 20 ನಿಮಿಷ ರಕ್ತದ ಮಡುವಿನಲ್ಲಿ ಬಿದ್ದು ನೆರವಿಗಾಗಿ ಅಂಗಲಾಚಿದರೂ, ಜನ ಮಾನವೀಯತೆಯನ್ನೇ ಮರೆತವರಂತೆ ವರ್ತಿಸಿದ್ದಾರೆ.

ಗಾಯಾಳು ಶ್ರೀಕಾಂತ್ ನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸದೇ, ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಮತ್ತೆ ಕೆಲವರು ಕಂಡೂ ಕಾಣದಂತೆ ಸ್ಥಳದಿಂದ ತೆರಳಿದ್ದಾರೆ.

ಕೆಲ ಸಮಯದ ಬಳಿಕ ಆಂಬುಲೆನ್ಸ್ ಆಗಮಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಬಂಗಾರಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...