alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಂಕಣ ರೈಲ್ವೇಯಿಂದ ಶೀಘ್ರದಲ್ಲೇ ಮಾನ್ಸೂನ್ ಪ್ಯಾಕೇಜ್

konkanrailwaysgoaಕುಮಟಾ: ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ  ಕೊಂಕಣ ರೈಲ್ವೇ ಆಧುನೀಕರಣಕ್ಕೆ 850 ಕೋಟಿ ರೂ. ವ್ಯಯಿಸಲಾಗುವುದು. ಶೀಘ್ರವೇ ಕೊಂಕಣ ರೈಲ್ವೆಯಲ್ಲಿ ಮಾನ್ಸೂನ್ ಪ್ಯಾಕೇಜ್ ಗಳನ್ನು ಘೋಷಿಸಲಾಗುವುದು ಎಂದು ಕೇಂದ್ರ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

ಶುಕ್ರವಾರ ಮಿರ್ಜಾನ್ ರೈಲ್ವೆ ನಿಲ್ದಾಣದ ಶಿಲಾನ್ಯಾಸ ನೆರವೇರಿಸಿದ ಸುರೇಶ್ ಪ್ರಭು ಅವರು, ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವ ಅಗತ್ಯವಿದೆ. ಇದರಿಂದ ಉದ್ಯೋಗಾವಕಾಶಗಳು ಸಿಗುವುದರ ಮೂಲಕ ಆರ್ಥಿಕ ಮಟ್ಟ ಸುಧಾರಿಸುತ್ತದೆ ಎಂದಿದ್ದಾರೆ.

ರೈಲ್ವೆ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಈಗಾಗಲೇ ತಾಳಗುಪ್ಪ-ಹೊನ್ನಾವರ ರೈಲ್ವೆ ಮಾರ್ಗಕ್ಕೆ 275 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ. ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗ ಕೂಡ ಅಭಿವೃದ್ಧಿಗೊಳ್ಳಲಿದೆ. ಗೋಕರ್ಣದಲ್ಲಿ ಪಾರಂಪರಿಕ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಶಿರಸಿ- ಹುಬ್ಬಳ್ಳಿ ಮತ್ತು ಶಿರಸಿ- ಹಾವೇರಿ ಮಾರ್ಗಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳುತ್ತೇವೆ ಎಂದು ಸುರೇಶ್ ಪ್ರಭು ಮತ್ತು ಕೈಗಾರಿಕೆ ಸಚಿವ ಆರ್. ವಿ ದೇಶಪಾಂಡೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...